Friday, November 8, 2024

ಮೋದಿ ವಿರುದ್ದ ಮಹಾ ಒಗ್ಗಟ್ಟಿಗೆ ತಯಾರಿ: ನಾಳೆ ಸಿದ್ದು ಔತಣಕೂಟ ಆಯೋಜನೆ

ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ಮಹಾ ಒಗ್ಗಟ್ಟಿಗೆ ‘ಕೈ’ ಸಜ್ಜಾಗಿದ್ದು ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಸಭೆ ಪೂರ್ವ ತಯಾರಿ ನಡೆಸಲಾಗುತ್ತಿದೆ.

ಇದನ್ನೂ ಓದಿ: ಹಂಪಿಯಲ್ಲಿ ನಡೆದ ಜಿ-20 ಸಭೆ ಯಶಸ್ವಿ : ಅಮಿತಾಬ್ ಕಾಂತ್

ಜುಲೈ 17, ಸೋಮವಾರ ಮತ್ತು 18, ಮಂಗಳವಾರ, ನಡೆಯಲಿರುವ ಮಹಾಘಟಬಂಧನ್​ ಮಿತ್ರ ಪಕ್ಷಗಳ ಸಭೆಗೆ ಆಗಮಿಸಲಿರುವ ಮುಖಂಡರ ವಸತಿ ಮತ್ತು ಔತಣ ಕೂಟಗಳ ಪರಿಶೀಲನೆಯನ್ನು ರಣದೀಪ್​ ಸಿಂಗ್ ಸುರ್ಜೆವಾಲ ಮತ್ತು ಸಿದ್ದರಾಮಯ್ಯ ಪರಿಶೀಲನೆ ನಡೆಸಿದರು.

ಬೆಂಗಳೂರಿನ ಪಂಚತಾರಾ ಹೋಟೆಲ್‌ಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 17 ರಂದು ಬೆಂಗಳೂರಿನಲ್ಲಿ ಔತಣಕೂಟವನ್ನು ಏರ್ಪಡಿಸಿದ್ದಾರೆ.

ಈ ಔತಣಕೂಟದಲ್ಲಿ ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ರಾಜ್ಯಸಭಾ ಸಂಸದ ಡೆರೆಕ್ ಒ’ಬ್ರೇನ್ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿಯೊಂದಿಗೆ ಸಭೆಗೆ ಆಗಮಿಸುತ್ತಾರೆ ಮತ್ತು ಅವರ ಟಿಎಂಸಿ ಪ್ರತಿನಿಧಿಗಳಾಗಿ ಔತಣಕೂಟದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್​ ವರಿಷ್ಟರಾದ ಸೋನಿಯಾ ಗಾಂಧಿ ಮತ್ತು ರಾಹುಲ್​ ಗಾಂಧಿ ಜುಲೈ 18 ರಂದು ನಡೆಯಲಿರುವ ಸಭೆಗೆ ಹಾಜರಾಗಲಿದ್ದಾರೆ,ಆಮ್​ ಆದ್ಮಿ ಪಕ್ಷವೂ ಸೇರಿದಂತೆ 24 ಪಕ್ಷಗಳಿಗೆ ಈ ಸಭೆಯಲ್ಲಿ ಭಾಗಿಯಾಗಲು ಆಹ್ವಾನಿಸಲಾಗಿದೆ.

RELATED ARTICLES

Related Articles

TRENDING ARTICLES