ಉತ್ತರ ಕನ್ನಡ : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅವೈಜ್ಞಾನಿಕ ಕಾಮಗಾರಿ ಆರೋಪ ಹಿನ್ನೆಲೆ ಬಸ್‌ನಲ್ಲಿ ತೆರಳಿ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸೂಚನೆ ಮೇರೆಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ನೇತೃತ್ವದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಕಾರವಾರದ ಮಾಜಾಳಿಯಿಂದ ಭಟ್ಕಳ ಗಡಿಯವರೆಗೆ ಅಧಿಕಾರಿಗ ಹೆದ್ದಾರಿ ಕಾಮಗಾರಿ ವೀಕ್ಷಿಸಿದ್ದಾರೆ. ಐಆರ್‌ಬಿ, NHAI ಅಧಿಕಾರಿಗಳು, ತಹಶೀಲ್ದಾರ್, ಪೌರಾಯುಕ್ತ, ಡಿವೈಎಸ್ಪಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.
ಇದನ್ನೂ ಓದಿ : ಟೋಲ್ ದರ ಹೆಚ್ಚಳ, ಹೆದ್ದಾರಿಯಲ್ಲಿ ಪ್ರತಿಭಟನೆ
ಹೆದ್ದಾರಿ ಉದ್ದಕ್ಕೂ ರಸ್ತೆ, ಟನಲ್, ಸೂಚನಾಫಲಕ, ಡೈವರ್ಶನ್, ಬೀದಿದೀಪ, ಸರ್ವೀಸ್ ರೋಡ್ ಕಾಮಗಾರಿ ಪರಿಶೀಲಿಸಿದ್ದಾರೆ. ಕಾಮಗಾರಿ ಪರಿಶೀಲನೆ ವೇಳೆ ಅಧಿಕಾರಿಗಳಿಗೆ ಡಿಸಿ ಅಗತ್ಯ ಸೂಚನೆ ನೀಡಿದ್ದಾರೆ. ಅವೈಜ್ಞಾನಿಕ ರೀತಿಯಲ್ಲಿ ಗುಡ್ಡ ಕೊರೆದಿರುವಿಕೆ, ಗುಡ್ಡ ಕುಸಿತ ಪ್ರದೇಶಗಳನ್ನೂ ಅಧಿಕಾರಿಗಳು ವೀಕ್ಷಿಸಿದ್ದಾರೆ.