Sunday, December 22, 2024

ಮೇಯಲು ಹೋದ ಹಸು ವಿದ್ಯುತ್ ಸ್ಪರ್ಶದಿಂದ ಸಾವು

ಶಿವಮೊಗ್ಗ : ಟ್ರಾನ್ಸ್ ಫಾರ್ಮರ್ ಬಳಿ ಹುಲ್ಲು ಮೇಯಲು ಹೋದ ಸೀಮೆ ಹಸುವೊಂದು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಸೊರಬ ಪಟ್ಟಣದ ಮರೂರು ರಸ್ತೆಯಲ್ಲಿ ಈ ಘಟನೆ ನಡೆದಿದೆ. ಚಾಮರಾಜಪೇಟೆಯ ನಾಗರಾಜಗೌಳಿ ಎಂಬುವವರಿಗೆ ಸೇರಿದ ಹಸು ಇದಾಗಿದೆ.

ನಿನ್ನೆ ಶನಿವಾರ ಮೇಯಲು ಹೋದ ಹಸು ಇಂದು ಕೂಡ ಮನೆಗೆ ಹಿಂದಿರುಗಿರಲಿಲ್ಲ. ಎಲ್ಲೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ ವಿದ್ಯುತ್ ತಗುಲಿ ಮೃತ ಪಟ್ಟಿರುವುದು ತಿಳಿದು ಬಂದಿದೆ.

ಇದನ್ನೂ ಓದಿ : ಕಡಿದು ಬಿದ್ದ ವಿದ್ಯುತ್ ತಂತಿ ತುಳಿದು ಯುವಕ ಸಾವು

15 ಲೀಟರ್ ಹಾಲು ನೀಡುತ್ತಿದ್ದ ಹಸು

ಕಳೆದ ಮೂರು ದಿನದ ಹಿಂದೆಯಷ್ಟೆ, ಮೊದಲ ಕರುವಿಗೆ ಜನ್ಮ ನೀಡಿದ ಹಸು ಪ್ರತಿನಿತ್ಯ ಸುಮಾರು 15 ಲೀಟರ್ ಹಾಲು ನೀಡುತ್ತಿತ್ತು. ಸುಮಾರು ಒಂದು ಲಕ್ಷ ರೂ. ಮೌಲ್ಯದ ಹಸು ಇದಾಗಿದೆ ಎನ್ನಲಾಗಿದೆ. ಮೆಸ್ಕಾಂ ಇಲಾಖೆಯ ಬೇಜವಾಬ್ದಾರಿಯಿಂದ ಹಸು ಮೃತ ಪಟ್ಟಿದೆ.

ಸೂಕ್ತ ಪರಿಹಾರಕ್ಕೆ ಒತ್ತಾಯ

ಹೈನುಗಾರಿಕೆಯಿಂದಲೇ ಜೀವನ ಸಾಗಿಸುತ್ತಿದ್ದ ನಾಗರಾಜ್ ಗೌಳಿ ಅವರಿಗೆ ಮೆಸ್ಕಾಂ ಇಲಾಖೆ ಸೂಕ್ತ ಪರಿಹಾರ ನೀಡಬೇಕು. ಪುರಸಭೆ ವ್ಯಾಪ್ತಿಯಲ್ಲಿನ ಟ್ರಾನ್ಸ್ ಫಾರ್ಮರ್ ಗಳ ಸುತ್ತ ಬೇಲಿ ನಿರ್ಮಿಸಬೇಕು ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES