Wednesday, January 22, 2025

ಕೇಂದ್ರದ ಮಾನಿಟ್ರಿ ಕಮಿಟಿಯಲ್ಲಿ ನೀರಿಗಾಗಿ ತಮಿಳುನಾಡು ಬೇಡಿಕೆ : ಚಲುವರಾಯಸ್ವಾಮಿ

ಮಂಡ್ಯ : ಕೇಂದ್ರದ ಮಾನಿಟ್ರಿ ಕಮಿಟಿಯಲ್ಲಿ ನೀರಿಗಾಗಿ‌ ತಮಿಳುನಾಡು ಪ್ರಸ್ತಾಪ ಇಟ್ಟಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಆರ್‌ಎಸ್‌ ಡ್ಯಾಂನಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಬಂದ ಬೆನ್ನಲ್ಲೇ ನೀರಿಗಾಗಿ ತಮಿಳುನಾಡು ಬೇಡಿಕೆ ಇಟ್ಟಿದೆ ಎಂದರು.

ಕಾವೇರಿ ನೀರಿಗೆ ಮತ್ತೆ ತಮಿಳುನಾಡು ತಗಾದೆ ಎತ್ತಿದೆ. ಬಿಡಬೇಕಾದ ನೀರು ಬಿಡಿ ಎಂದು ತಮಿಳುನಾಡು ಬೇಡಿಕೆ ಇಟ್ಟಿದೆ. ಕಾವೇರಿ ನೀರಾವರಿ ಸಮಿತಿಯ ಸಭೆಯ ಬಳಿಕ ಈ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ : ಕಾಂಗ್ರೆಸ್ ನವರೇ ಇಷ್ಟು ಆತುರ ಏಕೆ? : ಹೆಚ್.ಡಿ ಕುಮಾರಸ್ವಾಮಿ

ನೀರು‌ ಬಿಡದ ಪರಿಸ್ಥಿತಿ ಇದೆ

ಮಳೆಯ ಸಮಸ್ಯೆ ಎದುರಾಗಿದೆ. ಒಂದು ಕಡೆ ಕುಡಿಯಲು ನೀರು ಬೇಕಾಗಿದೆ. ಇನ್ನೊಂದೆಡೆ ಕೇಂದ್ರದ ಮಾನಿಟ್ರಿಂಗ್ ಕಮಿಟಿಯಲ್ಲಿ ತಮಿಳುನಾಡು‌ ನೀರು ಕೇಳಿದೆ. ಇಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ತಮಿಳುನಾಡಿಗೆ ನೀರು‌ ಬಿಡದ ಪರಿಸ್ಥಿತಿ ಇದೆ. ರೈತರ ಬೆಳಗಳಿಗೂ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.

ನೀರು ಬಿಡಲು ಹೇಗೆ ಸಾಧ್ಯ?

ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನೀರಾವರಿ ಸಚಿವರ ಜೊತೆ ಚರ್ಚೆ ಮಾಡುತ್ತೇವೆ. ತಮಿಳುನಾಡಿಗೆ ವಾಡಿಕೆ ಪ್ರಕಾರ ಬಿಡಬೇಕಾದ ನೀರನ್ನು ಕೇಳಿದ್ದಾರೆ. ಕುಡಿಯುವ ನೀರಿಗೆ ಸಮಸ್ಯೆ ಇರುವಾಗ ತಮಿಳುನಾಡಿಗೆ ನೀರು ಬಿಡಲು ಹೇಗೆ ಸಾಧ್ಯ. ಈ ತಿಂಗಳ ಅಂತ್ಯಕ್ಕೆ ಮಳೆ ಬೀಳುತ್ತೆ ಅಂತ ಹೇಗೆ ಅಂದುಕೊಳ್ಳೋದು. ಈ ಬಗ್ಗೆ ನಾವು ಸಭೆ ನಡೆಸಲಿದ್ದೇವೆ ಎಂದು ಮಾಹಿತಿ ನೀಡಿದರು.

RELATED ARTICLES

Related Articles

TRENDING ARTICLES