ಬೆಂಗಳೂರು : ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ಶ್ರೀಗಂಧದ ಸಿತಾರ್ ಅನ್ನು ಉಡುಗೊರೆಯಾಗಿ ನೀಡಿದರು.
ಜತೆಗೆ ಫ್ರೆಂಚ್ ಅಧ್ಯಕ್ಷರ ಪತ್ನಿ, ಫ್ರಾನ್ಸ್ ಪ್ರಧಾನಿ, ಫ್ರೆಂಚ್ ಸೆನೆಟ್ ಅಧ್ಯಕ್ಷರು ಮತ್ತು ಫ್ರೆಂಚ್ ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷರಿಗೆ ವಿಶಿಷ್ಟ ಉಡುಗೊರೆಗಳನ್ನು ನೀಡಿದರು.
ಎಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ನೀಡಿದ ಸಿತಾರ್ ಅನ್ನು ಶುದ್ಧ ಶ್ರೀಗಂಧದ ಮರದಿಂದ ಮಾಡಲಾಗಿದೆ. ಶ್ರೀಗಂಧದ ಕೆತ್ತನೆಯ ಕಲೆಯು ಒಂದು ಸೊಗಸಾದ ಮತ್ತು ಪ್ರಾಚೀನ ಕರಕುಶಲವಾಗಿದ್ದು, ಇದು ಶತಮಾನಗಳಿಂದ ದಕ್ಷಿಣ ಭಾರತದಲ್ಲಿ ಅಸ್ತಿತ್ವದಲ್ಲಿದೆ.
ಸರಸ್ವತಿ ದೇವಿಯ ಚಿತ್ರ
ಪ್ರಧಾನಿ ಮೋದಿ ನೀಡಿರುವ ವಿಭಿನ್ನ ಉಡುಗೊರೆಯು ಸಿತಾರ್ ಎಂಬ ಸಂಗೀತ ವಾದ್ಯವನ್ನು ಹಿಡಿದಿರುವ ಜ್ಞಾನ, ಸಂಗೀತ, ಕಲೆ, ಮಾತು, ಬುದ್ಧಿವಂತಿಕೆ ಮತ್ತು ಕಲಿಕೆಯ ಆರಾಧ್ಯ ದೇವತೆಯಾದ ಸರಸ್ವತಿ ದೇವಿಯ ಚಿತ್ರಗಳನ್ನು ಹೊಂದಿದೆ.
PM Narendra Modi gifted Sandalwood Sitar to French President Emmanuel Macron
The unique replica of the musical instrument Sitar is made of pure sandalwood. The art of sandalwood carving is an exquisite and ancient craft that has been practised in Southern India for centuries. pic.twitter.com/IUefiRLN65
— ANI (@ANI) July 14, 2023
ಅರಬ್ ರಾಷ್ಟ್ರಕ್ಕೆ ಮೋದಿ ಆಗಮನ
ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಪ್ರವಾಸ ಮುಗಿಸಿ, ಯುಎಇಗೆ ಭೇಟಿ ನೀಡಿದ್ದಾರೆ. ಫ್ರಾನ್ಸ್ಗೆ ಎರಡು ದಿನಗಳ ಭೇಟಿ ಮುಗಿಯುತ್ತಿದ್ದಂತೆ, ಅಬುಧಾಬಿಗೆ ರಾಜತಾಂತ್ರಿಕ ಒಂದು ದಿನದ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿ ಅವರನ್ನು ಅಬುಧಾಬಿ ಕ್ರೌನ್ ಪ್ರಿನ್ಸ್ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ವಿಧ್ಯುಕ್ತವಾಗಿ ಬರಮಾಡಿಕೊಂಡಿದ್ದಾರೆ.
ಭಾರತ-ಯುಎಇ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವು ಉತ್ತಮವಾಗಿ ಬಲಗೊಳ್ಳುತ್ತಿದೆ. ಇದನ್ನೂ ಮುಂದಕ್ಕೂ ಹೀಗೆ ಕೊಂಡೊಯ್ಯವ ಸಲುವಾಗಿ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಭೇಟಿ ನೀಡಿದ್ದಾರೆ. ಭಾರತದ G-20 ಪ್ರೆಸಿಡೆನ್ಸಿಗೆ ಯುಎಇಯನ್ನು ವಿಶೇಷವಾಗಿ ಆಹ್ವಾನಿಸಲು ಕೂಡ ಈ ಭೇಟಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ ಮೋದಿ ಎಂದು ಹೇಳಿದ್ದಾರೆ.