Sunday, December 22, 2024

ಕೆಲಸ ಹುಡುಕಿ ಬಂದ ಯುವಕರು ನಿಗೂಢ ಸಾವು

ಹಾಸನ : ರೂಮ್ ನಲ್ಲಿ ಮಲಗಿದ್ದ ಇಬ್ಬರು ಯುವಕರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಹಾಸನ ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ನಡೆದಿದೆ.

ಉತ್ತರಪ್ರದೇಶದ ನಯನಪುರ್ ಗ್ರಾಮದ ನವಾಬ್ (24) ಹಾಗೂ ರಾಮ್ ಸಂಜೀವನ್ (30) ಮೃತ ಯುವಕರು. ಉದ್ಯೋಗವನ್ನು ಹರಸಿ ಬಂದಿದ್ದ ಇಬ್ಬರು ಯುವಕರು ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಹನುಮಂತಪುರ ಗ್ರಾಮದ ಮಹೇಶ್ ಎಂಬುವವರಿಗೆ ಸೇರಿದ ಬಾಡಿಗೆ ಮನೆಯ ರೂಮ್ ನಲ್ಲಿ ಯುವಕರು ವಾಸವಿದ್ದರು. ಬಂದ ಸ್ವಲ್ಪ ದಿನದಲ್ಲೇ ಕೆಸವನ್ನು ಹುಡುಕಿಕೊಂಡು ಕೆಲಸಕ್ಕೆ ಹೋಗುತ್ತಿದ್ದರು. ಕೆಲಸಕ್ಕೆ ಹೋದ ಎರಡು ದಿನದಲ್ಲೇ ಇಬ್ಬರು ಜ್ವರದಿಂದ ಬಳಲಿದ್ದರು. ಹೀಗಾಗಿ, ರಜೆಯನ್ನು ಹಾಕಿದ್ದರು.

ಇದನ್ನೂ ಓದಿ : ನ್ಯಾಯಾಧೀಶರ ಕಾರು ಮತ್ತು ಬಸ್ ನಡುವೆ ಅಪಘಾತ!

ಔಷಧಿ ಸೇವಿಸಿ ಮಲಗಿದ್ದರು

ಅನಾರೋಗ್ಯದಿಂದ ಬಳಲುತ್ತಿದ್ದ ಇಬ್ಬರು ಆಸ್ಪತ್ರೆಗೆ ಹೋಗಿ ಬಂದಿದ್ದರು. ಆಸ್ಪತ್ರೆಯಿಂದ ಬಂದ ಮೇಲೆ ಊಟ ಮುಗಿಸಿಕೊಂಡು ಇಬ್ಬರು ಔಷಧಿ ಸೇವಿಸಿ ಮಲಗಿದ್ದರು. ಬಳಿಕ, ಎರಡು ದಿನವಾದರು ಯುವಕರು ರೂಮ್ ನ ಬಾಗಿಲು ತೆಗಿದಿರಲಿಲ್ಲ. ಇದನ್ನು ಗಮನಿಸಿದ ಮನೆಯ ಮಾಲೀಕ ಮಹೇಶ್ ಬಾಗಿಲನ್ನು ಮುರಿದು ಒಳಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮಲಗಿದ್ದ ಸ್ಥಳದಲ್ಲೇ ಯುವಕರು ಉಸಿರು ಚೆಲ್ಲಿ ಸಾವನ್ನಪ್ಪಿದ್ದರು. ತಕ್ಟಣವೇ ಪೊಲೀಸರಿಗೆ ಮನೆಯ ಮಾಲೀಕ ಮಾಹಿತಿ ತಿಳಿಸಿದ್ದರು. ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿ, ಮೃತದೇಹಗಳನ್ನು ಹಾಸನ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ.  ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES