Wednesday, January 22, 2025

ಮಾಜಿ ಸಿಎಂ ತವರು ಕ್ಷೇತ್ರದಲ್ಲಿ ದಲಿತ ಸಮುದಾಯಕ್ಕಿಲ್ಲ ನಿವೇಶನ

ಹಾವೇರಿ : ನಿವೇಶನ ಕಲ್ಪಿಸುವಂತೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲು ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಅಸುಂಡಿ ಗ್ರಾಮದ ಜನರು ಮುಂದಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಅಸುಂಡಿ ಗ್ರಾಮದಲ್ಲಿ 50 ದಲಿತ ಕುಟುಂಬವಿದ್ದು, ಸುಮಾರು 300 ಜನರು ವಾಸ ಮಾಡ್ತಿದ್ದಾರೆ. ಆದರೆ, ಇವರುಗಳಿಗೆ ವಾಸಿಸಲು ಸರಿಯಾದ ಮನೆಗಳಿಲ್ಲ. ಮನೆಗಳನ್ನು ನಿರ್ಮಿಸಲು ಇವರಿಗೆ ಜಾಗವೂ ಇಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಫ್ಲೈ ಓವರ್​ ಮೇಲೆ ಸ್ಕೂಟರ್​ ಅಡ್ಡಗಟ್ಟಿ 1.7ಕೋಟಿ ಮೌಲ್ಯದ ಚಿನ್ನ ರಾಬರಿ!

ಕೈ ಕಾಲು ಇಡಲು ಜಾಗವಿಲ್ಲ

ಪುಟ್ಟ ಮನೆಯಲ್ಲಿ ಆರು ಕುಟುಂಬಗಳು ವಾಸವಾಗಿದ್ದೇವೆ. ಕೈ ಕಾಲು ಇಡಲು ಜಾಗವಿಲ್ಲ. ಬೇಸಿಗೆ ಕಾಲದಲ್ಲಿ ಗುಡಿ, ಗುಂಡಾರದಲ್ಲಿ ಮಲಗುತ್ತೇವೆ. ಕಳೆದ 50 ವರ್ಷಗಳಿಂದ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡು ದಲಿತ ಕುಟುಂಬಗಳು ನಿವೇಶನಕ್ಕಾಗಿ ಅವಿರತ ಹೋರಾಟ ಮಾಡುತ್ತಿದೇವೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇನ್ನು ಬಡವರಿಗೆ ನಿವೇಶನ ಕಲ್ಪಿಸಲು ಅಸುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಳಗೆ ಯಾವುದೇ ಗೋಮಾಳ ಜಮೀನು ಲಭ್ಯವಿಲ್ಲ. ಆದರೆ, ಬೇರೆಡೆಯಾದರೂ ನಮಗೆ ನಿವೇಶನ ನೀಡಿ ಎಂದು ಪ್ರತಿಭಟನಾ ನಿರತರು ಒತ್ತಾಯ ಮಾಡಿದ್ದಾರೆ.

RELATED ARTICLES

Related Articles

TRENDING ARTICLES