Thursday, January 23, 2025

ಭೀಕರ ಸರಣಿ ಅಪಘಾತ, ಸ್ಥಳದಲ್ಲೇ ಬ್ಯಾಂಕ್ ಉದ್ಯೋಗಿ ಸಾವು

ದಾವಣಗೆರೆ : ಭೀಕರ ಸರಣಿ ಅಪಘಾತ ಸಂಭವಿಸಿ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಶುಭಾ(49) ಸ್ಥಳದಲ್ಲೇ ಸಾವನ್ನಪ್ಪಿರುವ ಮಹಿಳೆ. ಮೃತ ಶುಭಾ ಅವರು ನಗರದ ಬ್ಯಾಂಕ್ ಒಂದರಲ್ಲಿ ಕಾರ್ಯ ನಿರ್ವಹಿಸುತಿದ್ದರು ಎಂದು ತಿಳಿದುಬಂದಿದೆ.

ನಗರದ ಜಿಲ್ಲಾ ಪಂಚಾಯತ್ ಮತ್ತು ಎಸ್.ಎಸ್ ಆಸ್ಪತ್ರೆ ಮಧ್ಯೆ ಈ ಘಟನೆ ಸಂಭವಿಸಿದೆ. ಮೃತ ಶುಭಾ ಅವರು ಎಸ್.ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಸಂಬಂಧಿಕರಿಗೆ ಊಟ ತೆಗೆದುಕೊಂಡು ಹೋಗುತ್ತಿದ್ದರು.

ಇದನ್ನೂ ಓದಿ : ಕೆಎಸ್​ಆರ್​ಟಿಸಿ ಬಸ್​ಗೆ ಸಿಕ್ಕಿ ವಿದ್ಯಾರ್ಥಿ ಸಾವು

ಈ ವೇಳೆ ಕಾರ್ ಟೈರ್ ಬ್ಲಾಸ್ಟ್ ಆಗಿ ಶುಭಾ ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೂರು ಕಾರು ಸೇರಿ ಮೃತಳ ಸ್ಕೂಟಿ ಸಂಪೂರ್ಣ ಜಖಂ ಆಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಗಾಯಗಳಾಗಿವೆ.

ಚಿರತೆ ದಾಳಿ : ಬಾಲಕಿ ಸಾವು

ಚಿರತೆ ದಾಳಿಯಿಂದ ಗಂಭೀರ ಗಾಯಗೊಡಿದ್ದ ಬಾಲಕಿ ಸಾವನ್ನಪ್ಪಿದ್ದಾಳೆ. ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಬಾಲಕಿ ಸುಶೀಲಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಗ್ಗಲಿಗುಂದಿ ಸೋಲಿಗರ ಹಾಡಿಯಲ್ಲಿ ಚಿರತೆ ದಾಳಿ ನಡೆಸಿತ್ತು.

RELATED ARTICLES

Related Articles

TRENDING ARTICLES