Thursday, December 19, 2024

ಬಸ್‌ಗಳು ಫುಲ್ ರಶ್ : ಕಿಟಕಿಗಳಿಂದ ಸೀಟು ಹಿಡಿಯಲು ಪರದಾಟ

ಚಾಮರಾಜನಗರ : ಶಕ್ತಿ ಯೋಜನೆ ಎಫೆಕ್ಟ್​ನಿಂದ ಬಸ್ ನಿಲ್ದಾಣದಲ್ಲಿ ಬಸ್​ಗಳೆಲ್ಲ ಫುಲ್ ರಶ್​ ಆಗಿದೆ. ಅದೇ ರೀತಿ ಚಾಮರಾಜನಗರ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಿತ್ಯ ಜನರು ಪರದಾಡುವಂತಾಗಿದೆ.

ಚಾಮರಾಜನಗರ ಬಸ್ ನಿಲ್ದಾಣದಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ‌ ಸಂಜೆ ವೇಳೆ ಜನರ ಪರದಾಡುತ್ತಿದ್ದಾರೆ. ಬೆಳಗ್ಗೆ 7ರಿಂದ 9 ಗಂಟೆ, ಸಂಜೆ 4ರಿಂದ 6 ಗಂಟೆಯವರೆಗೂ ಬಸ್​ಗಳಿಗಾಗಿ ಜನರ ಪರದಾಡುವಂತಾಗಿದೆ.

ಪ್ರತಿ ಬಸ್​ಗಳಲ್ಲೂ ಎರಡು ಬಸ್​ನಷ್ಟು ಜನ ಇರುವ ಪರಿಸ್ಥಿತಿ ಎದುರಾಗಿದೆ. ವಿದ್ಯಾರ್ಥಿಗಳು ಹಾಗೂ ಮಹಿಳೆಯರ ನೂಕಾಟವಾಗಿದ್ದು, ಕಿಟಕಿಗಳಿಂದ ಸೀಟು ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಹೆಚ್ಚುವರಿ ಬಸ್ ನಿಯೋಜನೆ ಮಾಡಬೇಕೆಂದು ಜನರ ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES