Thursday, December 26, 2024

ಪೆನ್​ ಡ್ರೈವ್​ ರಹಸ್ಯ ರಿಲೀಸ್​ ಗೆ ಡೇಟ್​ ಫಿಕ್ಸ್ ಮಾಡಿದ ಕುಮಾರಸ್ವಾಮಿ!

ಬೆಂಗಳೂರು: ಸದನದಲ್ಲಿ ಕೋಲಾಹಲವೆಬ್ಬಿಸಿದ್ದ ಪೆನ್​ ಡ್ರೈವ್​ ರಹಸ್ಯ ರಿಲೀಸ್​ ಮಾಡಲು ಮಾಜಿ ಸಿಎಂ ಕುಮಾರಸ್ವಾಮಿ ಸಜ್ಜಾಗಿದ್ದು ದಿನಾಂಕ ನಿಗಧಿಪಡಿಸಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಡಾ.ವೀರೇಂದ್ರ ಹೆಗ್ಗಡೆ ಮೆಚ್ಚುಗೆ ಪತ್ರ !

ಸದನ ಆರಂಭವಾದಾಗಿನಿಂದ ಚರ್ಚೆಗೆ ಗ್ರಾಸವಾಗಿದ್ದ ಪೆನ್‌ ಡ್ರೈವ್‌ ರಹಸ್ಯ ವನ್ನು ಮಾಜಿ ಸಿಎಂ ಕುಮಾರಸ್ವಾಮಿ ಸಿದ್ದತೆ ಮಾಡಿಕೊಂಡಿದ್ದಾರೆ, ಈ ಹಿಂದೆ ಪೆನ್​ಡ್ರೈವ್ ರಹಸ್ಯ ಬಯಲು ಮಾಡಲು ಅರ್ಜೆಂಟ್ ಏನಿದೆ ಎಂದಿದ್ದ ಅವರೇ,  ಈಗ ಪೆನ್​ ಡ್ರೈವ್​ ರಹಸ್ಯ ಬಿಡುಗಡೆಗೊಳಿಸಲು ಸಜ್ಜಾಗಿದ್ದಾರೆ,

ಬೆಂಗಳೂರಿನಲ್ಲಿ ಕಾಂಗ್ರೆಸ್ ಮಿತ್ರ ಪಕ್ಷಗಳ ಮಹಾಘಟಬಂದನ್​ ಸಭೆ ಜುಲೈ 17,18 ರಂದು ಹಮ್ಮಿಕೊಳ್ಳಲಾಗಿದೆ, ಈ ಸಭೆಗೆ ಕಾಂಗ್ರೆಸ್​ ಹೈಕಮಾಂಡ್​ ಸೋನಿಯಾ, ರಾಹುಲ್‌,  ಮಲ್ಲಿಕಾರ್ಜುನ್​ ಖರ್ಗೆ ಸೇರಿದಂತೆ ಹಲವು ನಾಯಕರು ಆಗಮಿಸಲಿದ್ದಾರೆ.  ​

ಕಾಂಗ್ರೆಸ್​ ಹೈಕಮಾಂಡನ್ನು ಇಕ್ಕಟ್ಟಿಗೆ ಸಿಲುಕಿಸಲು ಜುಲೈ 17,18 ರಂದೇ ಪೆನ್‌ ಡ್ರೈವ್‌ ಒಳಗಿನ ರಹಸ್ಯ ಬಯಲು ಮಾಡಲು ಪ್ಲಾನ್​ ಮಾಡಿದ್ದಾರೆ.

RELATED ARTICLES

Related Articles

TRENDING ARTICLES