ಚಿಕ್ಕಮಗಳೂರು: ರಸ್ತೆ ಇಲ್ಲದ ರೋಗಿಯನ್ನ ಜೋಳಿಗೆಯಲ್ಲಿ ಹೊತ್ತು ತಂದು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಕಳಸ ತಾಲೂಕಿನ ಕಲ್ಕೋಡು ಗ್ರಾಮದಲ್ಲಿ ಘಟನೆ.
ಹೌದು, ನಮ್ಮ ರಾಜ್ಯದಲ್ಲಿ ರಸ್ತೆ ಇಲ್ಲದ ಪರಿಸ್ಥಿತಿಗಳು ಇಂದಿಗೂ ಜೀವಂತವಾಗಿದೆ. ಸೂಕ್ತವಾದ ರಸ್ತೆ ಇಲ್ಲದ ಕಾರಣ ಜೋಳಿಗೆಯಲ್ಲಿ 70 ವರ್ಷದ ಶೇಷಮ್ಮರನ್ನು ಕುಟುಂಬಸ್ಥರು ಸುಮಾರು 1 ಕಿ.ಮೀ ಹೊತ್ತು ತಂದು ಆಸತ್ರೆಗೆ ದಾಖಲಿಸಿದ್ದಾರೆ. ಈ ಗ್ರಾಮದಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆ 30-40 ಜನಸಂಖ್ಯೆಯ ಕಾಡಂಚಿನ ಕುಗ್ರಾಮಗಳಿವೆ, ಆದರೆ ಓಡಾಡಲು ಸೂಕ್ತ ರಸ್ತೆ ಇಲ್ಲವೇ ಇಲ್ಲ.
ಇದನ್ನೂ ಓದಿ: ಕೊಬ್ಬರಿ ಬೆಳೆಗಾರರಿಗೆ ಗುಡ್ ನ್ಯೂಸ್ : ಬೆಂಬಲ ಬೆಲೆ ಹೆಚ್ಚಳ ಮಾಡಿದ ರಾಜ್ಯ ಸರ್ಕಾರ
ಯಾರಾದರೂ ಕಲ್ಕೋಡು ಗ್ರಾಮದಿಂದ ಕಳಸ ತಾಲೂಕಿಗೆ ಬರಬೇಕು ಅಂದರೆ 4 ಕಿ.ಮೀ. ಆಗುತ್ತದೆ. 3-4 ಕಿ.ಮೀ. ಬಂದರೆ ಆಟೋ ಸಿಗುತ್ತೆ ಆದರೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಅಧಿಕಾರಿಗಳು ರಸ್ತೆ ಬಿಡುತ್ತಿಲ್ಲ, ರಸ್ತೆಗಾಗಿ ಸಾಕಷ್ಟು ಬಾರಿ ಮನವಿ ಮಾಡಿದ್ದರು ಅಧಿಕಾರಿಗಳು, ಜನನಾಯಕರು ಈವರೆಗೂ ಯಾರೂ ಕೂಡ ಸ್ಪಂದಿಸಿಲ್ಲ ಎಂದು ಸ್ಥಳೀಯರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.