Wednesday, January 22, 2025

ಪ್ರಿಯತಮೆಯನ್ನು ಕೊಂದು ಮಗು ಅಪಹರಿಸಿದ ಪ್ರಿಯಕರ

ದೇವನಹಳ್ಳಿ : ಪ್ರಿಯಕರನೇ ಗೃಹಿಣಿಯನ್ನು ಕೊಲೆ ಮಾಡಿ, ಆಕೆಯ 5 ವರ್ಷದ ಮಗುವನ್ನು ಅಪಹರಿಸಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕೊಳೂರು ಗ್ರಾಮದಲ್ಲಿ ನಡೆದಿದೆ.

ಕೊಳೂರು ಗ್ರಾಮದ ನಿವಾಸಿ ಭಾರತಿ(27) ಕೊಲೆಯಾದ ಮಹಿಳೆ. ಪ್ರಿಯಕರ ಹರೀಶ್​ ಎಂಬಾತ ರಾತ್ರಿ ಮನೆಗೆ ನುಗ್ಗಿ ಕೃತ್ಯವೆಸಗಿದ್ದಾನೆ ಎಂದು ಶಂಕಿಸಲಾಗಿದೆ.

ಇದನ್ನು ಓದಿ : ಹೇ.. ರೇವಣ್ಣ ನಿಂಬೆಹಣ್ಣು ಬಿಟ್ಟು, ಕೊಬ್ಬರಿ ಜೊತೆ ಬಂದಿದ್ಯಾ? : ಸಿದ್ದರಾಮಯ್ಯ

ಮೃತ ಭಾರತಿ ಕುಟುಂಬ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಪತಿ ಮನೆಗೆ ಬಂದಾಗ ಪತ್ನಿ ಭಾರತಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾಳೆ. ಅತ್ತ 5 ವರ್ಷದ ಹೆಣ್ಣು ಮಗುವನ್ನ ಹುಡುಕಿದಾಗ ಎಲ್ಲಿಯೂ ಸಿಕ್ಕಿಲ್ಲ. ಕೂಡಲೇ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಈ ಸಬಂಧ ಪ್ರಕರಣ ದಾಖಲಿಸಿಕೊಂಡು ಪ್ರಿಯಕರನ ಪತ್ತೆಗೆ ಬಲೆ ಬೀಸಿದ್ದಾರೆ.

RELATED ARTICLES

Related Articles

TRENDING ARTICLES