Sunday, December 22, 2024

ಕಾಂಗ್ರೆಸ್ ಬಂದ್ಮೇಲೆ ರೌಡಿ ಎಲಿಮೆಂಟ್ಸ್ ಜಾಸ್ತಿ ಆಗುತ್ತಿದೆ : ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ : ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ ರಾಜ್ಯದಲ್ಲಿ ರೌಡಿ ಎಲಿಮೆಂಟ್ಸ್ ಜಾಸ್ತಿ ಆಗುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಗುಡುಗಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಬಂದೂ 2-3 ತಿಂಗಳ ಕೂಡ ಆಗಿಲ್ಲ. ಕೊಲೆಗಳ ಸರಣಿ ಆಗಿದೆ. ಸರ್ಕಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸರ್ಕಾರ ಬರುತ್ತಿದ್ದಂತೆ ರಾಜ್ಯದಲ್ಲಿ ಜೈನಮುನಿ ಹತ್ಯೆ ಅಗಿದೆ. ಅದನ್ನು ನೆನಸಿಕೊಂಡರೆ ಭಯದ ಜೊತೆ ನೋವಾಗುತ್ತೆ. ಈ ರೀತಿಯ ಭಯಂಕರ ಕೃತ್ಯ ಮಾಡಲು ಸಾಧ್ಯವಿಲ್ಲ. ಅಷ್ಟು ನೋವಾಗಿದೆ. ಈ ವಿಚಾರದಲ್ಲಿ ರಾಜಕಾರಣ ಮಾಡಲು ನಾನು ಇಷ್ಟಪಡಲ್ಲ ಎಂದು ಬೇಸರಿಸಿದರು.

ಇದನ್ನೂ ಓದಿ : ಆರೋಪ ಸಾಬೀತಾದ್ರೆ ರಾಜಕೀಯದಿಂದಲೇ ನಿವೃತ್ತಿ ಆಗ್ತೀನಿ : ಸಿದ್ದರಾಮಯ್ಯ

ಧರ್ಮ ವಿರೋಧಿಗಳು ಇದ್ದಾರಾ?

ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರ ಬಂಧನದ ಮೂಲಕ ಎಲ್ಲವೂ ಬಗೆಹರಿಯುತ್ತೆ ಅಂತ ನನಗೆ ಅನಿಸುತ್ತಿಲ್ಲ‌. ರಾಜ್ಯ ಪೊಲೀಸ್ ಇಲಾಖೆ ಬಗ್ಗೆ ನನಗೆ ಸ್ಪಷ್ಟ ಗೌರವಿದೆ. ಜೈನ ಧರ್ಮ ಹಾಗೂ ಮುನಿಗಳ ಬಗ್ಗೆ ವಿರೋಧ ಮಾಡುವವರು ಇದ್ದಾರಾ? ಧರ್ಮ ವಿರೋಧಿಗಳು ಯಾರಾದರೂ ಇದ್ದಾರಾ? ಅಂತ ಗೊತ್ತಾಗಬೇಕಿದೆ ಎಂದು ಹೇಳಿದರು.

ಪ್ರಕರಣ ಸಿಬಿಐಗೆ ನೀಡುವ ವಿಚಾರ ಕುರಿತು ಮಾತನಾಡಿದ ಅವರು, ಡಾ.ಜಿ ಪರಮೇಶ್ವರ್ ಅವರು ಅನುಭವಿ ಗೃಹಮಂತ್ರಿ. ಅವರಿಗೆ ಎಲ್ಲವೂ ಗೊತ್ತಿದೆ. ಹೀಗಾಗಿ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಕೆ.ಎಸ್ ಈಶ್ವರಪ್ಪ ಒತ್ತಾಯಿಸಿದರು.

RELATED ARTICLES

Related Articles

TRENDING ARTICLES