Wednesday, December 25, 2024

ಭಾಗ್ಯಗಳಿಂದಲೇ ಜನರು ನಮ್ಮನ್ನು ‘ಕೈ’ ಹಿಡಿದಿರೋದು : ಸಿದ್ದರಾಮಯ್ಯ

ಬೆಂಗಳೂರು : ಹಿಂದೆ ನಾವು ಅಧಿಕಾರದಲ್ಲಿದ್ದಾಗ ಮಾಡಿದ ಭಾಗ್ಯಗಳಿಂದಲೇ ಇವಾಗ ಜನರು ನಮ್ಮನ್ನು ‘ಕೈ’ ಹಿಡಿದಿರೋದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಇವರ ಭ್ರಷ್ಟಾಚಾರ, ದುರಾಡಳಿತದಿಂದ ಜನರು ಇವರನ್ನು ಅಧಿಕಾರದಿಂದ ದೂರ ಇಟ್ಟಿದ್ದಾರೆ ಎಂದು ಗುಡುಗಿದರು.

ಚುನಾವಣೆ ಆಗಿ ಎರಡು ತಿಂಗಳಾಯಿತು. ಸರ್ಕಾರ ರಚೆನೆಯಾಗಿ ಎರಡು ತಿಂಗಳು ಆಗ್ತಾ ಬಂತು. ಸದನ ಪ್ರಾರಂಭವಾಗಿ 12 ದಿನ ಆಯ್ತು. ಆದರೆ, ಇನ್ನೂ ಪ್ರತಿಪಕ್ಷ ನಾಯಕರ ಆಯ್ಕೆಯಾಗಿಲ್ಲ. ಇದು ಕರ್ನಾಟಕದ ಇತಿಹಾಸದಲ್ಲೇ ಮೊದಲು. ಪ್ರತಿಪಕ್ಷ ನಾಯಕನಿಲ್ಲದೆ ಸದನ ನಡೆಯುತ್ತಿರುವುದು ಎಂದು ಕುಟುಕಿದರು.

ಇದನ್ನೂ ಓದಿ : 80 ಸೀಟು ತಗೊಂಡು ದೇವೇಗೌಡ್ರು ಮನೆ ಕಾದಿಲ್ಲವೇ? : ಬೊಮ್ಮಾಯಿ

ನನ್ನ ಮೇಲೆ ಅಷ್ಟಾದ್ರೂ‌ ವಿಶ್ವಾಸ ಇದೆಯಲ್ಲ

ಬಸವರಾಜ ಬೊಮ್ಮಾಯಿಯವರೇ ನಿಮಗೆ ಅವಕಾಶ ಕೊಡಬೇಕು ಎಂದು ಸಿದ್ದರಾಮಯ್ಯ ಬೊಮ್ಮಾಯಿ ಕಾಲೆಳೆದರು. ಆಗ ಬೊಮ್ಮಾಯಿ, ನನ್ನ ಮೇಲೆ ಅಷ್ಟಾದ್ರೂ‌ ವಿಶ್ವಾಸ ಇದೆಯಲ್ಲ ಎಂದರು. ಅದಕ್ಕೆ ಸಿದ್ದರಾಮಯ್ಯ, ಅಲ್ವೇಸ್.. ನಿಮ್ಮ ಮೇಲೆ ನಮಗೆ ವಿಶ್ವಾಸವಿದೆ ಎಂದು ಹೇಳಿದರು.

ನಮ್ಮಲ್ಲಿ 60 ಜನರೂ‌ ಲೀಡರ್ ಗಳೇ..

ಮುಂದುವರಿದು ಬೊಮ್ಮಾಯಿ, ನಮ್ಮ ಪಕ್ಷದ ಬಗ್ಗೆ ನಿಮಗೇಕೆ ಕಾಳಜಿ. ನಮ್ಮ ಪಕ್ಷದನ್ನು ನಾವು ನೋಡಿಕೊಳ್ತೇವೆ. ನಮ್ಮಲ್ಲಿ 60 ಜನರೂ‌ ಲೀಡರ್ ಗಳೇ. ನನ್ನ ಮೇಲೆ ವಿಶ್ವಾಸ ಇಟ್ಟಿದ್ದಕ್ಕೆ ಕೃತಜ್ಙತೆ ಹೇಳ್ತೇನೆ ಎಂದು ಸಿದ್ದರಾಮಯ್ಯ ಮಾತಿಗೆ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು.

RELATED ARTICLES

Related Articles

TRENDING ARTICLES