ಮೈಸೂರು : ದಕ್ಷಿಣ ಕಾಶಿ ಎಂದೆ ಪ್ರಖ್ಯಾತವಾಗಿ ಮೈಸೂರುನಲ್ಲಿರುವ ನಂಜನಗೂಡು ದೇಗುಲಕ್ಕೆ ದೇಶ ವಿದೇಶಗಳಿಂದ ಸದಾ ಸಾವಿರಾರು ಭಕ್ತರು ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ದೇಗುಲಕ್ಕೆ ಕಾಣಿಕೆಯಾಗಿ ಅರ್ಪಿಸಿದ್ದು, ಮತ್ತೆ ನಂಜನಗೂಡು ಶ್ರೀಕಂಠೇಶ್ವರ ಕೋಟ್ಯಾಧಿಪತಿಯಾಗಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ.
ಹೌದು, ಮೈಸೂರಿನಪ್ರಮುಖ ದೇಗುಲಗಳ ಪೈಕಿ ನಂಜುಂಡೇಶ್ವರನ ದೇಗುಲವೇ ಜನರ ನೆಚ್ಚಿನ ದೇವಸ್ಥಾನ ಆಗಿದ್ದು, ಇತ್ತೀಚೆಗೆ ಹೊರ ರಾಜ್ಯ ಹಾಗೂ ಇತರೆ ಜಿಲ್ಲೆಗಳಿಂದ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಪಕ್ಕದ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಉತ್ತರ ಭಾರತದಿಂದ ಬರುವವರ ಸಂಖ್ಯೆ ಹೆಚ್ಚಿದೆ.
ಇದೇ ಕಾರಣದಿಂದ ದೇಗುಲಕ್ಕೆ ಹೆಚ್ಚಾಗಿ ಕಾಣಿಕೆ ಹರಿದುಬಂದಿದೆ . ಎರಡು ತಿಂಗಳಿಂದ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಇದರ ಪರಿಣಾಮ ಹುಂಡಿಯಲ್ಲಿ ಈ ಬಾರಿ ದೇಶಿ ಕರೆನ್ಸಿ ಸೇರಿದಂತೆ ನೋಟುಗಳು ಸಂಗ್ರಹವಾಗಿದೆ .
ನಂಜನಗೂಡು ಶ್ರೀಕಂಠೇಶ್ವರ ದೇಗುಲದ ಹುಂಡಿ ಎಣಿಕೆ ಕಾರ್ಯ ಭರದಿಂದ ನಡೆದಿದ್ದು, ಈ ಬಾರಿ 1 ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ ನಂಜನಗೂಡು ಶ್ರೀಕಂಠೇಶ್ವರ ದೇಗುಲ ಆಡಳಿತ ಮಂಡಳಿ ತಿಳಿಸಿದೆ.
ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಶ್ರೀಕಂಠೇಶ್ವರ ದೇಗುಲದ 38 ಹುಂಡಿಗಳಲ್ಲಿ 1,77,08,710 ರೂಪಾಯಿ ಸಂಗ್ರಹವಾಗಿದೆ. 65 ಗ್ರಾಂಗೂ ಹೆಚ್ಚು ಚಿನ್ನ, 3 ಕೆಜಿ 540 ಗ್ರಾಂ ಬೆಳ್ಳಿ ಹಾಗೂ 64 ವಿದೇಶಿ ಕರೆನ್ಸಿ ನೋಟು ಹುಂಡಿಯಲ್ಲಿ ಸಂಗ್ರಹವಾಗಿದೆ.