Sunday, December 22, 2024

ಮುಂದೆ ನಿಮ್ಮ ಇಂಡಿಯಾ ಸರ್ಕಾರವನ್ನೂ ಕೆಡವುತ್ತೇವೆ : ಶಿವಲಿಂಗೇಗೌಡ ಸವಾಲು

ಬೆಂಗಳೂರು : ಮುಂದೆ ನಿಮ್ಮ ಇಂಡಿಯಾ ಸರ್ಕಾರವನ್ನೂ‌ ಕೆಡವುತ್ತೇವೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ನೋಡಿ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಶಾಸಕ ಕೆ.ಎಂ ಶಿವಲಿಂಗೇಗೌಡ ಸವಾಲು ಹಾಕಿದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ರೀ ಸುಮ್ಮನೆ ನೀವು ಯಾಕೆ ಹೇಳ್ತೀರ. ಕಾಂಗ್ರೆಸ್​ಗೆ ಬಂದಿದ್ದಕ್ಕೆ 135 ಸೀಟು ಬಂದಿದ್ದು ಎಂದು ಗುಡುಗಿದರು.

ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ ಎನ್ನುವ ವಿಚಾರ ವಿಷಯಾಂತರವೇ? ನಿಮಗೆ ಮಾತ್ರವೇ ಕೂಗಾಡೋಕೆ ಬರೋದು. ಎಲ್ಲಿ ನಾನು ವಿಷಯಾಂತರ ಮಾಡಿದ್ದೇನೆ. ಸುಮ್ಮನೆ ಪದೇ ಪದೆ ಯಾಕೆ ಎದ್ದು ನಿಲ್ಲುತ್ತೀರಾ? ನಾವು ಮಾತನಾಡೀಕೆ ಬಿಡಿ ಎಂದು ಕಿಡಿಕಾರಿದರು.

ಬೊಮ್ಮಾಯಿ 4 ಗಂಟೆ ಮಾತನಾಡಲಿಲ್ಲವೇ?

ಬಸವರಾಜ ಬೊಮ್ಮಾಯಿ 4 ಗಂಟೆ ಮಾತನಾಡಲಿಲ್ಲವೇ? ನಾವು, ಅವರು ಮಾತನಾಡುವವರೆಗೆ ಸುಮ್ಮನೆ ಕೂರಲಿಲ್ಲವೇ? ಈಗ ನೀವು ಯಾಕೆ ಎದ್ದೆದ್ದು ನಿಲ್ತೀರಿ? ನಮಗೂ ಅಡ್ಡಿಪಡಿಸೋದು ಬರುತ್ತದೆ. ನೀವು‌ ಮಾತನಾಡುವಾಗ ನಾವು ಎದುರು ಬರ್ತೇವೆ ಎಂದು ಬಿಜೆಪಿ ಸದಸ್ಯರಿಗೆ ಶಿವಲಿಂಗೇಗೌಡ ವಾರ್ನಿಂಗ್ ಕೊಟ್ಟರು.

ಇದನ್ನೂ ಓದಿ : ಅನ್ನಭಾಗ್ಯ ಯೋಜನೆಯಲ್ಲ ಇದು ಕನ್ನ ಭಾಗ್ಯ : ಮಾಜಿ ಸಿಎಂ ಬೊಮ್ಮಾಯಿ ಕಿಡಿ

ನಾನು ಮಾತನಾಡುವುದು ಹೀಗೆಯೇ

ಕೇಂದ್ರ ಯಾಕೆ ಅಕ್ಕಿ ಕೊಡುತ್ತಿಲ್ಲ. ನಾವು ಯಾಕೆ ಒಕ್ಕೂಟ ವ್ಯವಸ್ಥೆಯಲ್ಲಿರಬೇಕು. ಕೊಟ್ಟು ತೆಗೆದುಕೊಳ್ಳದಿದ್ದ ಮೇಲೆ ನಾವು ಯಾಕ್ರೀ ಇರಬೇಕು. ನಾನು ಮಾತನಾಡುವುದು ಹೀಗೆಯೇ. ಇದನ್ನು ಇಲ್ಲಿಗೆ ಬಿಡ್ತೀವಿ ಅಂದುಕೊಳ್ಳಬೇಡಿ. ಪಾರ್ಲಿಮೆಂಟ್ ಚುನಾವಣೆವರೆಗೂ ಅರೆಯುತ್ತೇವೆ. ಇದೇ ವಿಚಾರವನ್ನು ಅರೆಯುತ್ತೇವೆ ಎಂದು ಆಕ್ರೋಶ ಹೊರಹಾಕಿದರು.

ಶಿವಲಿಂಗೇಗೌಡ ಮಾತಿಗೆ ಬಿಜೆಪಿ ಸದಸ್ಯರು ಕೆಂಡವಾದರು. ಈ ವೇಳೆ ಬಿಜೆಪಿ ಶಾಸಕ ಸುನೀಲ್ ಕುಮಾರ್ ಮಧ್ಯ ಪ್ರವೇಶಿಸಿ, ಶಿವಲಿಂಗೇಗೌಡರು ಅರೆಯುತ್ತೇವೆ ಅಂತಿದ್ದಾರೆ. ಹಿಂದೆ ಜೆಡಿಎಸ್​ ಪಕ್ಷದಲ್ಲಿದ್ದಾಗ ಏನು ಅರೆದ್ರಿ? ಈಗ ಕಾಂಗ್ರೆಸ್​ನಲ್ಲಿ ಏನು ಅರೆಯುತ್ತಿದ್ದೀರಿ ಹೇಳಲಿ ಎಂದು ಪ್ರಶ್ನೆ ಮಾಡಿದರು.

RELATED ARTICLES

Related Articles

TRENDING ARTICLES