Wednesday, January 22, 2025

ನನ್ನ ತಪ್ಲಿಂದ ಸಮ್ಮಿಶ್ರ ಸರ್ಕಾರ ಹೋಯ್ತಾ? : ಕುಮಾರಸ್ವಾಮಿ ಕಿಡಿ

ಬೆಂಗಳೂರು : ನನ್ನ ತಪ್ಲಿಂದ ಸಮ್ಮಿಶ್ರ ಸರ್ಕಾರ ಬಿದ್ದು ಹೋಯ್ತಾ? ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಕುದುರೆ ವ್ಯಾಪಾರದ ಬಗ್ಗೆ ನಮಗೆ ಯಾವುದೇ ಯೋಗ್ಯತೆ ಇಲ್ಲ. ಕುದುರೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟವರು ಯಾರು? ಎಂದು ಪ್ರಶ್ನಿಸಿದರು.

ಯುಪಿಎ ಸರ್ಕಾರ ಇದ್ಸಾಗ ನ್ಯೂಕ್ಲಿಯರ್ ಡೀಲ್ ಗೆ ಕುದುರೆ ವ್ಯಾಪಾರ ಮಾಡಿಲ್ವಾ? ನನ್ನ ಕಾಲದಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇನೆ. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಾಡಿದ್ರೆ ಸೂಕ್ತ. ಈ ವ್ಯಾಪಾರ ಬಿಟ್ಟು, ಜ್ಯೋತಿ ಹಾಗೂ ಮತ್ತೆ ಗ್ಯಾರಂಟಿಗಳ ಬಗ್ಗೆ ಮಾತನಾಡಿ ಎಂದು ಕುಟುಕಿದರು.

ಇದನ್ನೂ ಓದಿ : ನಾನು ಒಕ್ಕಲಿಗ ಎಂಬ ಕಾರಣಕ್ಕೆ ಹೆಚ್‌ಡಿಕೆ ಟಾರ್ಗೆಟ್ ಮಾಡ್ತಿದ್ದಾರೆ : ಚಲುವರಾಯಸ್ವಾಮಿ

ಆಪರೇಷನ್ ಹಸ್ತದ ಸುದ್ದಿ ಬರ್ತಿದೆ

ಸಿಎಂ ಸಿದ್ದರಾಮಯ್ಯ ಅವರು ಆಪರೇಷನ್ ಕಮಲದ ಬಗ್ಗೆ ಪ್ರಸ್ತಾಪ ಮಾಡಿದರು. ಈಗ ಮಧ್ಯಪ್ರವೇಶಿಸಿ, ಆಪರೇಷನ್ ಕಮಲ ಎಂಬುದು ಇತ್ತು‌. ಆದರೆ, ಮಾಧ್ಯಮಗಳಲ್ಲಿ ಕಳೆದ ಕೆಲವು ದಿನಗಳಿಂದ ಆಪರೇಷನ್ ಹಸ್ತ ಎಂಬ ಸುದ್ದಿ ಬರುತ್ತಿದೆ ಎಂದು ಕೌಂಟರ್ ಕೊಟ್ಟರು.

ಯಾವ ಆಪರೇಷನ್ ಬಂತು?

ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಆಪರೇಷನ್ ಕಮಲ ಅಂತೀರಲ್ಲ, ಈ ಹಿಂದೆ ಕೆಲವರು ರಾಜೀನಾಮೆ ಕೊಟ್ಟಿದ್ದರು. ಇದರಲ್ಲಿ ಯಾವ ಆಪರೇಷನ್ ಬಂತು? ಆ ರೀತಿ ನೋಡುವುದಾದರೆ ಮೊದಲ ಬಾರಿಗೆ ಆಪರೇಷನ್ ಮಾಡಿದ್ದೇ ಕಾಂಗ್ರೆಸ್ ಎಂದು ತಿರುಗೇಟು ನೀಡಿದರು.

RELATED ARTICLES

Related Articles

TRENDING ARTICLES