ಉತ್ತರ ಕನ್ನಡ : ಕಳೆದೊಂದು ವಾರದಿಂದ ರಾಜ್ಯದ ಹಲವು ಭಾಗಗಳಲ್ಲಿ ವರುಣನ ಆರ್ಭಟ ಜೋರಾಗಿಯೇ ಇದೆ. ಆದರೆ, ಉತ್ತರ ಕನ್ನಡ ಭಾಗಗಳಲ್ಲಿ ವರುಣನ ಆಗಮನವಾಗಿಲ್ಲ.
ಸರಿಯಾಗಿ ಮಳೆಯಾಗದ ಕಾರಣ ಈ ಭಾಗದ ರೈತರು ಕಂಗಾಲಾಗಿದ್ದಾರೆ. ಮಳೆಯಾಗದ ಕಾರಣ ರೈತರು ಜಮೀನಿನಲ್ಲಿ ಬೆಳೆದಿರುವ ಬೆಳೆಗಳೆಲ್ಲ ಒಣಗಿ ನಿಂತಿವಿ. ಒಣಗಿದ ಗಿಡಗಳನ್ನು ಕಂಡ ರೈತರು ಬೆಳೆಗಳನ್ನೇ ಕಡಿದು ಹಾಕುತ್ತಿದ್ದಾರೆ.
ಇದನ್ನು ಓದಿ : ಹಳೆ ಕಾರು ಮಾರಾಟ ಮಳಿಗೆಯಲ್ಲಿ ಖದೀಮರ ಕೈಚಳಕ
ರೈತರ ಪರಿಸ್ಥಿಗೆ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಬೇಕು ಎಂದು ಅನ್ನದಾತರು ಒತ್ತಾಯ ಮಾಡಿದ್ದಾರೆ. ಆದರೆ, ರಾಜ್ಯ ಸರ್ಕಾರ ಹಾಗೂ ವಿಪಕ್ಷಗಳು ಗ್ಯಾರಂಟಿ ಯೋಜನೆ ಕುರಿತು ಚರ್ಚೆ ನಡೆಸುತ್ತಿದ್ದಾರೆಯೇ ಹೊರತು, ರೈತರ ಸಮಸ್ಯೆಯ ಬಗ್ಗೆ ಸದನದಲ್ಲಿ ಯಾರೂ ಧ್ವನಿ ಎತ್ತುತ್ತಿಲ್ಲ ಎಂದು ರೈತರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಗ್ಯಾರಂಟಿ ಯೋಜನೆ ಬಿಟ್ಟು ರೈತನ ಸ್ಥಿತಿ ಹಾಗೂ ಮಳೆಯ ಬಗ್ಗೆ ಚರ್ಚೆ ಮಾಡಬೇಕು. ಮಳೆಯಿಲ್ಲದೆ ನೂರಾರು ಹೆಕ್ಟೇರ್ ಕಬ್ಬು ಬೆಳೆ ನಾಶವಾಗಿದೆ. ಇದರಿಂದ ತುಂಬಾ ನಷ್ಟವಾಗಿದೆ. ಸ್ವಲ್ಪ ರೈತರ ಕಷ್ಟದ ಬಗ್ಗೆಯು ಆಲಿಸಿ ಸ್ವಾಮಿ, ನಮ್ಮ ನೋವು ಗೊತ್ತಾಗುತ್ತದೆ ಎಂದು ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.