Thursday, January 9, 2025

ಆಕಸ್ಮಿಕ ಬೆಂಕಿ, ಸುಟ್ಟು ಭಸ್ಮವಾದ ಗುಡಿಸಲು

ತುಮಕೂರು : ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದ್ದು ಸುಟ್ಟು ಕರುಕಲಾದ ಗುಡಿಸಲು.

ಶಂಕರ್ ನಾಗ್ ಕೋಂ ಜುಂಜಣ್ಣ ಎಂಬುವವರಿಗೆ ಸೇರಿದ್ದ ಗುಡಿಸಲೊಂದು ಬೆಂಕಿಯ ಅವಘಡಕ್ಕೆ ಸುಟ್ಟು ಭಸ್ಮವಾಗಿರುವ ಘಟನೆ ಶಿರಾ ತಾಲ್ಲೂಕಿನ ಕೆ. ರಂಗನಹಳ್ಳಿಯಲ್ಲಿ ಕಂಡುಬಂದಿದೆ.

ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದ್ದು ಗ್ರಾಮದ ಜನರಿಗೆ & ಕುಟುಂಬದವರಿಗೆ ಅಚ್ಚರಿ ಮೂಡಿಸಿದೆ,

ಇದನ್ನು ಓದಿ : ಗಣಿಗಾರಿಕೆ ಮಾಡುವ ವೃತ್ತಿ ನನ್ನದಲ್ಲ : ಮುನಿರತ್ನ ಪ್ರತಿಕ್ರಿಯೆ

ಆದರೆ ಪುಣ್ಯಕ್ಕೆ ಮನೆಯಲ್ಲಿದ್ದ ಮನೆ ಮಂದಿಯಲ್ಲ ಕೂಲಿ ಕೆಲಸಕ್ಕೆಂದು ಹೋದ ಸಮಯದಲ್ಲಿ ಈ ಅವಘಡ ನೆಡೆದಿದೆ,ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಹೊತ್ತಿಗೆ ಸಂಪೂರ್ಣವಾಗಿ ಸುಟ್ಟು ಹೋಗಿದ್ದ ಗುಡಿಸಲು.

ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಹಾನಿ ನೆಡೆದಿಲ್ಲ.

ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣ ಗುಡಿಸಲು ಭಸ್ಮವಾಗಿದ್ದು, ಮನೆಯಲ್ಲಿದ್ದ ಧಾನ್ಯಗಳು, ಬಟ್ಟೆಗಳು ಹಾಗೂ ಆಭರಣಗಳು ಸುಟ್ಟು ಕರುಕಲಾಗಿದೆ. ಶಿರಾ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನೆಡೆದಿರುವ ಘಟನೆಯಾಗಿದೆ.

RELATED ARTICLES

Related Articles

TRENDING ARTICLES