ಬೆಂಗಳೂರು : ಲೋನ್ ಕಟ್ಟಿಲ್ಲ ಎಂದು ಟಾರ್ಚ್ರ್ ಕೊಟ್ಟ ಹಿನ್ನಲೆ ಇಂಜಿನಿಯರಿಂಗ್ ವಿದ್ಯಾರ್ಥಿ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ತೇಜಸ್ (22) ಮೃತ ವಿದ್ಯಾರ್ಥಿ. ಈತನು ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ಆರನೇ ಸೆಮಿಸ್ಟರ್ ನಲ್ಲಿ ಓದುತ್ತಿದ್ದ. ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಕಾಲೇಜಿಗೆ ಟಾಪರ್ ಆಗಿದ್ದನು. ಈ ಸಂಬಂಧ ತೇಜಸ್ ಪೋಷಕರು ಜಾಲಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮೃತ ತೇಜಸ್, ಸ್ನೇಹಿತ ಮಹೇಶ್ ಗಾಗಿ ಸ್ಲೈಲ್ಸ್ ಪೇ, ಕಿಸಾತ್ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್ ನಲ್ಲಿ ಲೋನ್ ಅನ್ನು ತೆಗೆದುಕೊಂಡಿದ್ದ ಎನ್ನಲಾಗಿದೆ. ಆದರೆ, ಮಹೇಶ್ ಕಳೆದ ವರ್ಷದಿಂದ ಇಎಂಐ ಕಟ್ಟಿರಲಿಲ್ಲ. ಇದರಿಂದ ತೇಜಸ್ ಆತಂಕಕ್ಕೆ ಒಳಗಾಗಿದ್ದನು.
ಇದನ್ನು ಓದಿ : ಈ ಸರ್ಕಾರ ಬಂದ್ಮೇಲೂ ಸಾಬ್ರಿಗೆ ರಕ್ಷಣೆ ಇಲ್ಲ : ಹೆಚ್.ಡಿ ರೇವಣ್ಣ
ಲೋನ್ ಕೊಟ್ಟವರ ವಿಪರೀತ ಟಾರ್ಚರ್
ಲೋನ್ ಕೊಟ್ಟವರು ವಿಪರೀತ ಟಾರ್ಚರ್ ನೀಡುತ್ತಿದ್ದರು. ಅದರಿಂದ ನೊಂದ ತೇಜಸ್ ಸಂಜೆ 6 ಗಂಟೆ ಸುಮಾರಿಗೆ ಡೆತ್ ನೋಟ್ ಬರೆದು ತನ್ನ ತಾಯಿಯ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತೇಜಸ್ ಮೃತದೇಹವನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಡೆತ್ ನೋಟ್ ನಲ್ಲಿ ಏನಿದೆ?
‘ನನ್ನನ್ನು ಕ್ಷಮಿಸಿ.. ನಾನು ಮಾಡಿರುವ ತಪ್ಪಿಗೆ ಬೇರೆ ದಾರಿಯಿಲ್ಲ.. ನಾನು ಮಾಡಿರುವ ಸಾಲ ತೀರಿಸಲು ಆಗೋದಿಲ್ಲ. ಅದಕ್ಕಾಗಿ ಇದು ನನ್ನ ಕೊನೆಯ ತೀರ್ಮಾನ.. ಥ್ಯಾಂಕ್ಸ್, ಗುಡ್ ಬಾಯ್..’ ಎಂದು ತೇಜಸ್ ಡೆತ್ ನೋಟ್ ಬರೆದು ಆತ್ನಹತ್ಯೆಗೆ ಶರಣಾಗಿದ್ದಾನೆ.