Sunday, January 19, 2025

ಅಣ್ಣಾ.. ಸ್ವಲ್ಪ ವೇಯ್ಟ್ ಮಾಡು..! ಅದು ನಿಮ್ಮ ಮನೆ ಬಾಗಿಲಿಗೇ ಬರುತ್ತೆ : ಲಕ್ಷ್ಮಣ ಸವದಿ

ಬೆಂಗಳೂರು : ವಿಪಕ್ಷ ನಾಯಕನ ಸ್ಥಾನ ನಿಮ್ಮ‌ ಮನೆ ಬಾಗಿಲಿಗೇ ಬರುತ್ತದೆ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರಿಗೆ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ವಿಧಾನಸಭೆಯಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಯಾಕೆ ಇಳಿಸಿದ್ರು? ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಅವರು ಅಧಿಕಾರದಿಂದ ಯಾಕೆ ಇಳಿದ್ರು? ಯಾವ ಕಾರಣಕ್ಕೆ ಅವರನ್ನು ಕೆಳಗಿಳಿಸಲಾಯ್ತು? ಇದರ ಬಗ್ಗೆ ಬಿಜೆಪಿಯವರು ಹೇಳಬೇಕು. ಈವರೆಗೆ ಯಾಕೆ ಇನ್ನೂ ಪ್ರತಿಪಕ್ಷದ ನಾಯಕರೇ ಇಲ್ಲ? ಎಂದು ಕುಟುಕಿದರು.

ಇದನ್ನೂ ಓದಿ : ನೀವೆಷ್ಟೇ ಬೆಂಕಿ ಹಚ್ಚಿದ್ರೂ ಹತ್ಕೊಳ್ಳಲ್ಲ : ಸದನದಲ್ಲಿ ಸಿದ್ದರಾಮಯ್ಯ-ಯತ್ನಾಳ್ ಜಟಾಪಟಿ

ಅವರನ್ನೇ ಮಾಡ್ತಾರೆ ನೋಡ್ತಿರಿ

ಈ ವೇಳೆ ಮಧ್ಯ ಪ್ರವೇಶಿಸಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಇನ್ನು ಯಾಕೆ ಮಾಡ್ತಿಲ್ಲ ಅಂತ ಕೇಳ್ತಿದ್ಯಲ್ಲ. ಸ್ವಲ್ಪ ವೇಯ್ಟ್ ಮಾಡು ಅಣ್ಣಾ. ಅದು ನಿಮ್ಮ‌ ಮನೆ ಬಾಗಿಲಿಗೇ ಬರುತ್ತದೆ. ಸಮರ್ಥವಾಗಿ ಯಾರೂ ಪ್ರತಿಪಕ್ಷ ನಾಯಕರಿಲ್ಲ. ಹಾಗಾಗಿ, ಕುಮಾರಸ್ವಾಮಿ ಸಮರ್ಥರು ಅಂತ ಗೊತ್ತಿದೆ. ಬಿಜೆಪಿ ಕುಮಾರಸ್ವಾಮಿಗೆ ಬೆಂಬಲಕೊಡುತ್ತೆ. ಹೀಗಾಗಿ, ಅವರನ್ನೇ ಮಾಡ್ತಾರೆ ನೋಡ್ತಿರಿ ಎಂದ ಜಿ.ಟಿ ದೇವೇಗೌಡರ ಮಾತಿಗೆ ಲಕ್ಷ್ಮಣ ಸವದಿ ಉತ್ತರ ನೀಡಿದರು.

RELATED ARTICLES

Related Articles

TRENDING ARTICLES