Saturday, January 18, 2025

ರಾಹುಲ್‌ಗೆ ಪ್ರಬುದ್ಧತೆ ಇಲ್ಲ, ನಾಲಿಗೆ ಮೇಲೆ ಹಿಡಿತ ಇಲ್ಲ : ಎಂ.ಪಿ ರೇಣುಕಾಚಾರ್ಯ

ದಾವಣಗೆರೆ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪ್ರಬುದ್ಧತೆ ಇಲ್ಲ, ಹಿಡಿತ ಇಲ್ಲ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಹೇಳಿದರು.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ಸಿಗರು ಈ ದೇಶದ ಕಾನೂನು ಗೌರವಿಸಬೇಕು ಎಂದು ಕುಟುಕಿದರು.

ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಅವರ ಪರವಾಗಿ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ರಾಹುಲ್ ಗಾಂಧಿಗೆ ನಾಯಕತ್ವ ಎಲ್ಲಿದೆ? ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇರಬೇಕು ಎಂದು ತಿಳಿಸಿದರು.

ಇದನ್ನೂ ಓದಿ : ರಾಹುಲ್​ ಗಾಂಧಿ ಅನರ್ಹ : ಶಿವಮೊಗ್ಗದಲ್ಲಿ ಕಾಂಗ್ರೆಸ್​ ನಾಯಕರ ಪ್ರತಿಭಟನೆ

ಕಾರ್ಯಕರ್ತರ ಮನಸ್ಸಿಗೆ ನೋವಿದೆ

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರ ಆಯ್ಕೆ ಗೊಂದಲ ವಿಚಾರ ಮಾತನಾಡಿ, ಬಹಳ ವಿಳಂಬ ಆಗಿದೆ ನಿಜ. ಆದಷ್ಟು ಬೇಗ ಆಯ್ಕೆ ಮಾಡುತ್ತಾರೆ. ಕಾರ್ಯಕರ್ತರ ಮನಸ್ಸಿಗೆ ನೋವಿದೆ, ಅಧಿಕೃತವಾಗಿ ನೇಮಕ ಮಾಡುತ್ತಾರೆ. ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಮುಂದಿನ ಚುನಾವಣೆಗೆ ಸನ್ನದ್ದರಾಗಬೇಕು. ಶೀಘ್ರದಲ್ಲೇ ಅಧ್ಯಕ್ಷರ, ವಿಪಕ್ಷನ ನಾಯಕರ ಆಯ್ಕೆ ಆಗುತ್ತದೆ ಎಂದರು.

ಪಕ್ಷ ತಮಗೆ ನೋಟೀಸ್ ಕೊಟ್ಟಿದೆ. ಅದಕ್ಕೆ ಯಾವುದೇ ಕಾರಣಕ್ಕೂ ಉತ್ತರ ಕೊಡೋದಿಲ್ಲ. ನಾನು ತಪ್ಪು ಮಾಡಿಲ್ಲ, ನೋಟೀಸ್ ಗೆ ಉತ್ತರ ಕೊಡಲ್ಲ. ನಾನು ಬಿಜೆಪಿ ಬಿಡಲ್ಲ, ಕಾಂಗ್ರೆಸ್ ಪಕ್ಷವನ್ನು ಸೇರಲ್ಲ ಎಂದು ಎಂ.ಪಿ ರೇಣುಕಾಚಾರ್ಯ ಸ್ಪಷ್ಟನೆ ನೀಡಿದರು.

RELATED ARTICLES

Related Articles

TRENDING ARTICLES