Monday, December 23, 2024

ನಿರುದ್ಯೋಗಿ ಬಿಜೆಪಿಗರಿಗೆ ಒಂದು ಸಣ್ಣ ಉದ್ಯೋಗ ಸಿಕ್ಕಿದೆ : ಲಕ್ಷ್ಮಣ ಸವದಿ ವ್ಯಂಗ್ಯ

ಬೆಂಗಳೂರು : ಪಾಪ ಬಿಜೆಪಿಯವರಿಗೆ ನಿರುದ್ಯೋಗ ಆದ ಸಂದರ್ಭದಲ್ಲಿ ಒಂದು ಸಣ್ಣ ಉದ್ಯೋಗ ಸಿಕ್ಕ ಹಾಗೆ ಆಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಲೇವಡಿ ಮಾಡಿದರು.

ಬಿಜೆಪಿ ಶಾಸಕರ ಪ್ರತಿಭಟನೆ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಕೆಲಸವಿಲ್ಲ ಎಂದು ಕುಟುಕಿದರು.

ಕಾನೂನು ಸುವ್ಯವಸ್ಥಿತ ಹಾಳಾಗಿದೆ ಅಂತ ಅವ್ರು ಪ್ರತಿಭಟನೆ ಮಾಡ್ತಾ ಇದ್ದಾರೆ. ಎರಡು ಕೊಲೆ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಭಟನೆ ಮಾಡ್ತಾ ಇದ್ದಾರೆ. ಬೆಳಗಾವಿ ಜೈನ ಮುನಿ ಕೊಲೆ, ಬಿಜೆಪಿ ಕಾರ್ಯಕರ್ತನ ಕೊಲೆ. ಈಗಾಗಲೇ ಬಹಿರಂಗ ಆಗಿದೆ. ಯಾರು ಕೊಲೆ ಮಾಡಿದ್ದಾರೆ ಅಂತ. ದಿಕ್ಕು ತಪ್ಪಿಸಲಿಕ್ಕೆ, ಜನರಿಗೆ ತಪ್ಪು ದಾರಿ ಎಳೆಯೋಕೆ ತಪ್ಪು ಕಲ್ಪನೆ ಸೃಷ್ಟಿ ಮಾಡ್ತಾ ಇದ್ದಾರೆ ಎಂದು ಛೇಡಿಸಿದರು.

ಇದನ್ನೂ ಓದಿ : ರಾಹುಲ್​ ಗಾಂಧಿ ಅನರ್ಹ : ಫ್ರೀಡಂ ಪಾರ್ಕ್​​ನಲ್ಲಿ ಕಾಂಗ್ರೆಸ್​ ನಾಯಕರ ಪ್ರತಿಭಟನೆ

ಅವ್ರು ಎಷ್ಟು ಕೇಸ್ ಸಿಬಿಐಗೆ ನೀಡಿದ್ರು?

ಸಿಬಿಐ ನೀಡಬೇಕು ಎಂಬ ಆಗ್ರಹ ಕುರಿತು ಮಾತನಾಡಿ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಎಷ್ಟು ಕೇಸ್ ಸಿಬಿಐಗೆ ನೀಡಿದ್ರು? ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಎಷ್ಟು ಕೇಸ್ ಸಿಬಿಐ ನೀಡಿದ್ದಾರೆ ಬೇಕು ಅಲ್ವಾ? ರಾಜ್ಯದ ಪೊಲೀಸರು ಸಾಕಷ್ಟು ಸಮರ್ಥ ಆಗಿದ್ದಾರೆ. ತುರ್ತು ತನಿಖೆ ಆಗಿ, ಬೇಗನೇ ಫಲಿತಾಂಶ ಬರುತ್ತದೆ ಎಂದರು.

ಇಲ್ಲಿರುವ ಪೊಲೀಸರೇ ತನಿಖೆ ಮಾಡೋದು

ಸಿಬಿಐನಿಂದ ಬೇಗ ಫಲಿತಾಂಶ ಬರಲ್ಲ. ನಾಲ್ಲಾರು ವರ್ಷ ಸಿಬಿಐ ತನಿಖೆ ಮಾಡುತ್ತೆ. ನ್ಯಾಯ ಸಿಗಬೇಕು ಅಲ್ವಾ? ಸಿಬಿಐನಲ್ಲಿರುವವರು ಹೊರ ದೇಶದಿಂದ ಬಂದಿಲ್ಲ. ಇಲ್ಲಿರುವ ಪೊಲೀಸರೇ ತನಿಖೆ ಮಾಡೋದು. ಸಿಎಂ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಯಾವುದೇ ದೊಡ್ಡ ಶಕ್ತಿ ಇರಲಿ, ಅವರನ್ನು ನಿಯಂತ್ರಣದಲ್ಲಿ ಇಡುತ್ತೇವೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES