Saturday, May 18, 2024

ಈ 2000ಕ್ಕೆ ಅತ್ತೆ-ಸೊಸೆ ನಡುವೆ ಜಗಳ ಆಗಬಹುದು : ಹೆಚ್.ಡಿ ಕುಮಾರಸ್ವಾಮಿ

ಬೆಂಗಳೂರು : ಈ 2000 ಹಣದಿಂದ ಅತ್ತೆ ಹಾಗೂ ಸೊಸೆ ನಡುವೆ ಘರ್ಷಣೆ ಆಗಬಹುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕುಟುಕಿದರು.

ವಿಧಾನಸಭೆ‌ಯಲ್ಲಿ ಮಾತನಾಡಿದ ಅವರು, ಈ 2000 ಸಾವಿರ ಹಣವನ್ನು ಯಾವ ರೀತಿ ಕೊಡಬೇಕು ಅಂತ ತೀರ್ಮಾನ ಮಾಡಬೇಕು ಎಂದು ಹೇಳಿದರು.

ಶಕ್ತಿ ಯೋಜನೆಯಿಂದ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡಿದ್ದೀರಿ. ಅದೇ ರೀತಿ ಖಾಸಗಿ ಬಸ್ಸು ಮಾಲೀಕರು, ಚಾಲಕರಿಗೆ, ಆಟೋ ಚಾಲಕರಿಗೆ ಏನು ಮಾಡಬೇಕು? ಅಂತ ಸರ್ಕಾರ ಯೋಚನೆ ಮಾಡಬೇಕು. ಬಸ್ ಟಿಕೆಟ್ ಹರಿಯೋದ್ರಲ್ಲೂ ಮಿಸ್ ಯೂಸ್ ಆಗುತ್ತಿದೆ. ಶಕ್ತಿ ಯೋಜನೆಗೆ ನಮ್ದೇನು ತಕರಾರು ಇಲ್ಲ. ಆದರೆ, ಇನ್ನೊಬ್ಬರ ಬದುಕಿನ ಬಗ್ಗೆಯೂ ಯೋಚನೆ ಮಾಡಬೇಕು ಎಂದು ಹೇಳಿದರು.

ಇದನ್ನೂ ಓದಿ : ಗಂಡ ಹೆಂಡತಿ ಜಗಳ: 8 ವರ್ಷದ ಕಂದಮ್ಮ ಸಾವು!

5 ಸಾವಿರಕ್ಕೆ ಕೊಲೆ ಅಂತ ಬರ್ತಿದೆ

ಈ ವೇಳೆ ಮಧ್ಯ ಪ್ರವೇಶಿಸಿದ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು, ಖಾಸಗಿ ಬಸ್ಸುಗಳಲ್ಲಿ ಓಡಾಡುವ ಮಹಿಳೆಯರ ಟಿಕೆಟ್ ದರವನ್ನು ಸರ್ಕಾರ ಭರಿಸಬೇಕು ಎಂದರು. ಮಾತು ಮುಂದುವರಿಸಿದ ಕುಮಾರಸ್ವಾಮಿ, ಗೃಹಲಕ್ಷ್ಮೀ ಯೋಜನೆಯಿಂದ ಕುಟುಂಬದಲ್ಲಿ ಸಾಮರಸ್ಯಗಳು ಆಗ್ತಿವೆ. ಬೆಳಗ್ಗೆ 5 ಸಾವಿರಕ್ಕೆ ಕೊಲೆ ಅಂತ ಟಿವಿಯಲ್ಲಿ ಬರ್ತಿದೆ ಎಂದರು.

2000 ರೂಪಾಯಿ ಅತ್ಯಂತ ದೊಡ್ಡ ಹಣ, ಈ ಹಣಕ್ಕೆ ಕುಟುಂಬ ಸದಸ್ಯರ ನಡುವೆ ಘರ್ಷಣೆ ಆಗದಂತೆ ಕೊಡಬೇಕು. ಈ ಹಣದಿಂದ ಅತ್ತೆ ಹಾಗೂ ಸೊಸೆ ನಡುವೆ ಜಗಳ ಆಗಬಹುದು. ಹಣ ಕೊಡುವ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರಕ್ಕೆ ಬರಬೇಕು ಎಂದು ಸರ್ಕಾರದ ಗಮನ ಸೆಳೆದರು.

RELATED ARTICLES

Related Articles

TRENDING ARTICLES