ಮಂಡ್ಯ : ಕುಮಾರಸ್ವಾಮಿ ಅವರ ಕರ್ಮದ ಫಲ, ಅವರ ಮಗ ರಾಜಕಾರಣದಲ್ಲಿ ಏಳಿಗೆ ಆಗ್ತಿಲ್ಲ ಎಂದು ಕೆಪಿಸಿಸಿ ವಕ್ತಾರ ಟಿ.ಎಸ್ ಸತ್ಯಾನಂದ ಕುಟುಕಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ದುರಾಂಕಾರದ ನಡವಳಿಕೆ, ಹೇಳಿಕೆ ಜಿಲ್ಲೆಯ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಜಿಲ್ಲೆಯ ಜನರು ಬುದ್ದಿ ಕಲಿಸಿ ಅವರ ನಾಯಕತ್ವವನ್ನು ತಿರಸ್ಕರಿಸಿದ್ದಾರೆ ಗುಡುಗಿದರು.
ಕಾಂಗ್ರೆಸ್ ಸಹಾಯದಿಂದ ಕುಮಾರಸ್ವಾಮಿ ಮುಖ್ಯಮಂತ್ರಿಯಾದ್ರು. ಕಳೆದ ಐದು ವರ್ಷದಿಂದ ಜೆಡಿಎಸ್ ಒಂದು ಚುನಾವಣೆಯನ್ನು ಸಹ ಗೆದ್ದಿಲ್ಲ. ನಾನು ಚಾಲೆಂಜ್ ಮಾಡ್ತೇನೆ. 2018 ಚುನಾವಣೆ ಬಿಟ್ಟರೆ ಯಾವ ಚುನಾವಣೆ ಸಹ ಜೆಡಿಎಸ್ ಗೆದ್ದಿಲ್ಲ. ಜೆಡಿಎಸ್ ಮಂಡ್ಯದಲ್ಲಿ ಸಂಪೂರ್ಣ ನೆಲಕಚ್ಚಿದೆ. ಮಂಡ್ಯ ಜನರ ಮೇಲೆ ಜೆಡಿಎಸ್ ದಬ್ಬಾಳಿಕೆ ಮಾಡಿದ್ರೆ ಮುಂದಿನ ದಿನಗಳಲ್ಲಿ ಪರಿಣಾಮ ಬೀರುತ್ತೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಈ ಸರ್ಕಾರ ಬಂದ್ಮೇಲೂ ಸಾಬ್ರಿಗೆ ರಕ್ಷಣೆ ಇಲ್ಲ : ಹೆಚ್.ಡಿ ರೇವಣ್ಣ
ಮಂಡ್ಯ ನಾಯಕತ್ವಕ್ಕೆ ಗೌರವ ಇದೆ
ಮಂಡ್ಯ ಜಿಲ್ಲೆಯ ನಾಯಕತ್ವಕ್ಕೆ ಒಂದು ಗೌರವ ಇದೆ. ದೇವೇಗೌಡ್ರು ಮಾಡಿದ ಹೋರಾಟ, ಕೆಲಸ, ಅವರ ಧರ್ಮದ ಮೂಲಕ ರಾಜಕೀಯ ಸ್ಥಾನಮಾನ ಪಡೆದು ಉನ್ನತ ಸ್ಥಾನ ಪಡೆದು ಮುಖ್ಯಮಂತ್ರಿ ಆದರು. ಸಿಕ್ಕ ಅವಕಾಶಗಳನ್ನು ವೈಯಕ್ತಿಕವಾಗಿ ಕುಮಾರಸ್ವಾಮಿ ಬಳಸಿಕೊಂಡರು. ಅವರ ಕರ್ಮದ ಫಲ, ಅವರ ಮಗ ರಾಜಕಾರಣದಲ್ಲಿ ಏಳಿಗೆ ಆಗ್ತಿಲ್ಲ ಎಂದು ಛೇಡಿಸಿದರು.
ರಾಜಕಾರಣದಲ್ಲಿ ಏಳುಬೀಳು ಇದ್ದದ್ದೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಂದ ಪಾಠ ಕಲಿತು ಭವಿಷ್ಯ ರೂಪಿಸಿಕೊಳ್ಳಿ. ಕ್ಷುಲ್ಲಕ ರಾಜಕಾರಣ ಬಿಟ್ಟು ರಾಜಕಾರಣ ಮಾಡಿ. ಕುಮಾರಸ್ವಾಮಿ ತಿದ್ದುಕೊಳ್ಳಬೇಕು, ಯಾರನ್ನು ಕೀಳಾಗಿ ಕಾಣಬಾರದರು ಎಂದು ಹೇಳಿದರು.