ಧಾರವಾಡ : ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಾಗರಹಾವೊಂದು ಚಿಕಿತ್ಸೆ ಬಳಿಕವೂ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ಮನಸೂರು ಗ್ರಾಮದಲ್ಲಿ ನಡೆದಿದೆ.
ಮನಸೂರು ಗ್ರಾಮದಲ್ಲಿ ಮನೋಜ್ ಎಂಬುವವರಿಗೆ ನಾಗರಹಾವೊಂದು ಸಿಕ್ಕಿತ್ತು. ಹಾವಿನ ರಕ್ಷಣೆ ಮಾಡುವ ವೇಳೆ ಗಂಟಲಿನಲ್ಲಿ ಕ್ಯಾನ್ಸರ್ ಗಡ್ಡೆಯೊಂದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಮನೋಜ್ ಧಾರವಾಡದ ಪಶು ಆಸ್ಪತ್ರೆಯಲ್ಲಿ ಹಾವಿಗೆ ಚಿಕಿತ್ಸೆ ಕೊಡಿಸಿದ್ದರು.
ಇದನ್ನು ಓದಿ : ವರ್ಗಾವಣೆ ದಂಧೆ ಲಿಸ್ಟ್ ತೋರಿಸಿ ಸರಿಪಡಿಸಿಕೊಳ್ಳಿ ಎಂದ ಕುಮಾರಸ್ವಾಮಿ
ಚಿಕಿತ್ಸೆ ಬಳಿಕ ನಾಗರಹಾವು ಆರೈಕೆಯಲ್ಲಿತ್ತು. ಆದರೆ, ಒಂದು ದಿನದ ಬಳಿಕ ಚಿಕಿತ್ಸೆ ಫಲಿಸದೆ ಹಾವು ಸಾವನ್ನಪ್ಪಿದೆ. ಇನ್ನೂ ಹಾವನ್ನು ರಕ್ಷಿಸಿ, ಚಿಕಿತ್ಸೆ ಕೊಡಿಸಿದ್ದ ಮನೋಜ್ ಅವರೇ ಹಾವಿನ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.