Monday, December 23, 2024

ಯುವಕನ ಬೆತ್ತಲೆ ಪ್ರಕರಣ : ಐವರು ಆರೋಪಿಗಳ ಬಂಧನ, ಕಾರಣ ಬಹಿರಂಗ

ಹುಬ್ಬಳ್ಳಿ : ಯುವಕನನ್ನು ಬೆತ್ತಲೆ ಮಾಡಿ ಹಲ್ಲೆ ಮಾಡಿದ ಪ್ರಕರಣದ ಸಂಬಂಧ ಐವರು ಆರೋಪಿಗಳನ್ನು ಬೆಂಡಿಗೇರಿ ಪೊಲೀಸರು ಬಂಧಿಸಿದ್ದಾರೆ.

ಪ್ರಜ್ಚಲ್, ವಿನಾಯಕ, ಗಣೇಶ, ಸಚಿನ್ ಹೊಸಮನಿ, ಮಂಜುನಾಥ ದೊಂಡಿ ಬಂಧಿತ ಆರೋಪಿಗಳು. ಇವರು ಸಂದೀಪ್ ಎಂಬ ಯುವಕನನ್ನು ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದರು. ಈ ಕುರಿತು ಪವರ್ ಟಿವಿ ಕೂಡಾ ವರದಿ ಮಾಡಿತ್ತು. ವರದಿ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿರುವ ಬೆಂಡಿಗೇರಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಸಂತೋಷ ಬಾಬು ಅವರು, ಇನ್​ಸ್ಟಾಗ್ರಾಂನಲ್ಲಿ ಪ್ರಜ್ವಲ್ ತಾಯಿಗೆ ಸಂದೀಪ್ ಬೈದಿದ್ದನು. ಇದರಿಂದ ಕುಪಿತರಾದ ಯುವಕರು ಹಲ್ಲೆ ಮಾಡಿದ್ದಾರೆ. ಮೂರು ನಾಲ್ಕು ತಿಂಗಳ ಹಿಂದೆ ನಡೆದ ಘಟನೆ‌ ಎಂದು ಹೇಳಿದ್ದಾರೆ.

ಇದನ್ನು ಓದಿ : ಮುನಿಗಳ ಹತ್ಯೆ ಹಿಂದಿರುವವರನ್ನು ರಕ್ಷಿಸುವ ಕೆಲಸ ಆಗ್ತಿದೆ : ಬೊಮ್ಮಾಯಿ ಆಕ್ರೋಶ

ಸಂದೀಪ್ ದೂರು ಕೊಟ್ಟಿಲ್ಲ

ಎರಡು ವಿಡಿಯೋ ಮೂಲಕ ನಮ್ಮ ಗಮನಕ್ಕೆ ವಿಷಯ ತಿಳಿದುಬಂದಿದೆ. ವಿಡಿಯೋದಲ್ಲಿ ಇರುವವರ ಹೆಸರು ಸಂದೀಪ್. ಸಂದೀಪ್ ಇನ್ ಸ್ಟಾ ಗ್ರಾಂನಲ್ಲಿ ಕೆಟ್ಟದಾಗಿ ಬೈತಿದ್ದ. ಇದುವೆರಗೂ ಸಂದೀಪ್ ದೂರು ಕೊಟ್ಟಿಲ್ಲ. ಹುಬ್ಬಳ್ಳಿಯ ಸೆಟ್ಲಮೆಂಟ್ ನಲ್ಲಿ ನಡೆದ ಘಟನೆ ಅನ್ನೋ ಅನುಮಾನ ಇದೆ. ಪೊಲೀಸರು ಈ ತರಹದ ಘಟನೆ ಆಗೋ ಮುಂಚೆ ಎಚ್ಚೆತ್ತಕೊಳ್ಳಬೇಕಿತ್ತು ಎಂದು ತಿಳಿಸಿದ್ದಾರೆ.

ಒಟ್ಟು ಐದು ಜನರನ್ನು ವಶಕ್ಕೆ ಪಡೆಯಲಾಗಿದೆ.‌ ವಿಡಿಯೋದಲ್ಲಿ ಇರುವ ಸಂದೀಪ್ ಗಾಗಿ ಹುಡುಕುತ್ತಿದ್ದೇವೆ. ಐದು ಜನರನ್ನು ವಶಕ್ಕೆ ಪಡೆದು ಶಹರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES