Monday, December 23, 2024

ಮೊದಲು ಚಿಕಿತ್ಸೆ.. ಆಮೇಲೆ ಬಿಲ್ಲಿಂಗ್.. : 2ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಯುನೈಟೆಡ್ ಆಸ್ಪತ್ರೆ

ಬೆಂಗಳೂರು : ಮೊದಲು ಚಿಕಿತ್ಸೆ. ಬಳಿಕ ಬಿಲ್ಲಿಂಗ್. ಇದು ಯುನೈಟೆಡ್ ಆಸ್ಪತ್ರೆಯ ಧ್ಯೇಯ. ಈ ಆಸ್ಪತ್ರೆಗೆ ಇದೀಗ ಎರಡನೇ ವಾರ್ಷಿಕೋತ್ಸವದ ಸಂಭ್ರಮ.

ಹೌದು, ಯುನೈಟೆಡ್ ಆಸ್ಪತ್ರೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಹೆಸರುವಾಸಿಯಾಗಿರುವ ಆಸ್ಪತ್ರೆ. ಸಕಾಲದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಜೀವ ಉಳಿಸುವ ನಿಟ್ಟಿನಲ್ಲಿ ಈ ಆಸ್ಪತ್ರೆ ಮುಂಚೂಣಿಯಲ್ಲಿದೆ. ವಿಶ್ವದರ್ಜೆ ಸೌಲಭ್ಯಗಳನ್ನು ಹೊಂದಿರುವ ಈ ಆಸ್ಪತ್ರೆ ಜನರಲ್ಲಿ ಭರವಸೆ ಮೂಡಿಸಿದೆ.

ಕರ್ನಾಟಕದಲ್ಲಿ ಮೂರು ಕಡೆ ಯುನೈಟೆಡ್ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಈ ಮೂರರಲ್ಲಿ ಕಲಬುರ್ಗಿಯಲ್ಲಿರುವ ಪ್ರಮುಖ ಅಂತಾರಾಷ್ಟ್ರೀಯ ಆಸ್ಪತ್ರೆಯು 150 ಹಾಸಿಗೆಗಳನ್ನು ಹೊಂದಿದೆ. ದಿನದ 24 ಗಂಟೆ ತುರ್ತು ಚಿಕಿತ್ಸೆ ಘಟಕವನ್ನು ಹೊಂದಿದೆ. ಬೆಂಗಳೂರಿನಲ್ಲಿರುವ ಪ್ರೀಮಿಯಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯನ್ನು ಆರಾಮದಾಯಕ ಅನುಭವ ನೀಡಲು ಪೂರಕವಾಗಿ ವಿನ್ಯಾಸಗೊಳಿಸಲಾಗಿದೆ. ಇದು 60 ಹಾಸಿಗೆಗಳನ್ನು ಒಳಗೊಂಡಿದೆ.

23,000 ಸಂಕೀರ್ಣ ಶಸ್ತ್ರಚಿಕಿತ್ಸೆ

ಯುನೈಟೆಡ್ ಆಸ್ಪತ್ರೆ ನಡೆದು ಬಂದ ದಾರಿಯೇ ರೋಚಕ. ಕಳೆದ ದಶಕದಲ್ಲಿ ಹಲವಾರು ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸಿದೆ. 37,000ಕ್ಕೂ ಹೆಚ್ಚು ನಿರ್ಣಾಯಕ ಹಂತದಲ್ಲಿ ತುರ್ತು ಅಗತ್ಯವಿರುವ ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದೆ. 23,000 ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಮಾಡಿದೆ. 45,000ಕ್ಕೂ ಹೆಚ್ಚು ಆರ್ಟಿ ಮತ್ತು ಪಿಸಿಆರ್ ಪರೀಕ್ಷೆಗಳನ್ನು ನಡೆಸಿದೆ.

ಕೋವಿಡ್ ರೋಗಿಗಳಿಗೆ ಯಶಸ್ವಿ ಚಿಕಿತ್ಸೆ

ಇದಲ್ಲದೆ, 1,500ಕ್ಕೂ ಹೆಚ್ಚು ಕೊರೋನಾ ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿ 800ಕ್ಕೂ ಹೆಚ್ಚು ಉಚಿತ ಶಿಬಿರಗಳು, ಗ್ರಾಮೀಣ ಸಂರ್ಕ ಮತ್ತು ಸಾಮಾಜಿಕ ಬೆಂಬಲ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಈ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಯುನೈಟೆಡ್ ಆಸ್ಪತ್ರೆ ಜನರ ಗಮನ ಸೆಳೆದಿದೆ.

‘ಜನ, ಜನರಿಂದ, ಜನರಿಗಾಗಿ’ ಎನ್ನುವ ಘೋಷ್ಯವಾಕ್ಯದೊಂದಿಗೆ ಆರೋಗ್ಯ ರಕ್ಷಣೆಯ ಸಂಕಲ್ಪಕ್ಕೆ ಯುನೈಟೆಡ್ ಆಸ್ಪತ್ರೆ ಬದ್ಧವಾಗಿದೆ.

RELATED ARTICLES

Related Articles

TRENDING ARTICLES