ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿಯಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿಯಲ್ಲಿ ಅಕ್ಕಿ ಜೊತೆ ನಗದು ಕೊಡುವ ಯೋಜನೆಗೆ ಇಂದು ಅಧೀಕೃತ ಚಾಲನೆ ಸಿಗುತ್ತದೆ.
ಹೌದು,ಅನ್ನಭಾಗ್ಯ ಯೋಜನೆಯಡಿಯಲ್ಲಿ 10ಕೆ.ಜಿ ಅಕ್ಕಿ ಕೊಡಲು ಭಾರೀ ಕಸರತ್ತು ನಡೆಸಿದ್ದು,ಕೊನೆಗೂ ಇಂದು ಚಾಲನೆ ಸಿಗಲಿದೆ. ಹಣದ ವಿಚಾರವಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇಂದು ಅನ್ನ ಭಾಗ್ಯ ಯೋಜನೆಯ 5 ಕೆಜಿ ಅಕ್ಕಿಗೆ ದುಡ್ಡು ಕೊಡುವ ಯೋಜನೆಗೆ ಚಾಲನೆ ನೀಡುತ್ತಿದ್ದಾರೆ. ಅಂದ್ರೆ ಕಾಂಗ್ರೆಸ್ನವರು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದರು ಇದೀಗ 5 ಕೆಜಿ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. FCI ಜೊತೆ ಮಾತನಾಡಿದ್ವಿ ಅಂತಾರೆ,ಕೇಂದ್ರ ಸರ್ಕಾರ ಹೇಳಿತ್ತಾ ಕಮಿಟ್ ಆಗಿತ್ತ ಅಲ್ಲೆ ಹೋಗಿ ಅಧಿಕಾರಿಗಳು ಬಳಿ ಮಾತನಾಡಬಹುದಿತ್ತಲ್ವಾ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಯತ್ನಾಳ್ಗೆ ರಾಜಕೀಯ ಬೆರೆಸಿ ಮಾತಾಡೋದ್ ಬಿಟ್ಟು ಬೇರೆ ಬರೋದಿಲ್ಲ: ಸಿಎಂ ಸಿದ್ದರಾಮಯ್ಯ
ಕಾಂಗ್ರೆಸ್ನವ್ರು ಬಡವರ ಅಕ್ಕಿ ವಿಚಾರದಲ್ಲಿ ಒಣಪ್ರತಿಷ್ಟೆ ತೋರಿಸುತ್ತಿದೆ. ಇನ್ನೂ ಎಷ್ಟು ದಿನಗಳವರೆಗೂ ಹಣ ಕೊಡ್ತೀರಿ,ಎಲ್ಲಿಯವರೆಗೂ ಕೊಡ್ತೀರಿ.ದುಡ್ಡು ಕೊಟ್ಟರೆ ಹಣ ತಿನ್ನೋಕೆ ಆಗುತ್ತಾ ಎಂದು ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.