Monday, November 18, 2024

ಇಂದಿರಾ ಕ್ಯಾಂಟೀನ್​ಗೆ ಡಿಸಿಎಂ ಭೇಟಿ ಬೆನ್ನಲ್ಲೇ ಹಲವು ಬದಲಾವಣೆ

ಬೆಂಗಳೂರು : ಅನಿರೀಕ್ಷಿತವಾಗಿ ನಿನ್ನೆ ಇಂದಿರಾ ಕ್ಯಾಂಟಿನ್ ‌ಗೆ  ಭೇಟಿ ನಿಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಮಗೆ ಕೆಲವೊಂದು ಸೂಚನೆಗಳನ್ನು ಕೊಟ್ಟಿದ್ದಾರೆ ಅದರಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಕಮಿಷನರ್ ತುಷಾರ್​ ಗಿರಿನಾಥ್​ ತಿಳಿಸಿದರು.

ಇಂದನ್ನೂ ಓದಿ: Zero Traffic: ಸಂಚಾರ ಸಮಯದಲ್ಲಿ ಜಿರೋ ಟ್ರಾಫಿಕ್ ನನಗೆ ಬೇಡ : ಸಚಿವ ಪ್ರಿಯಾಂಕ್​ ಖರ್ಗೆ

ನಗರದಲ್ಲಿ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್​ನಲ್ಲಿ ಹಳೆಯ ಹೆಲ್ಪ್‌ಲೈನ್ ನಂಬರ್‌ ನ್ನು ನಮೂಸಿರುವುದು ಡಿಸಿಎಂ ಗಮನಿಸಿದ್ದಾರೆ. ಚಾಲ್ತಿಯಲ್ಲಿಲ್ಲದ ಹಳೆಯ ಹೆಲ್ಪ್‌ಲೈನ್ ನಂಬರ್  ನಮುದಿಸಿರುವುದು ತಪ್ಪು ಮತ್ತು ಕೆಲವು  ಇಂದಿರಾ ಕ್ಯಾಂಟೀನ್​ ಗಳಲ್ಲಿ ನಿಗಧಿಗಿಂತ ಹೆಚ್ಚು ಹಣ ಪಡಯುತ್ತಿರುವುದು ಡಿಸಿಎಂ ಗಮನಕ್ಕೆ ಬಂದಿದೆ.

ಡಿಸಿಎಂ ಸೂಚನೆಯಂತೆ ಇನ್ನು ಮುಂದೆ ಪ್ರತಿನಿತ್ಯ ಇಂದಿರಾ ಕ್ಯಾಂಟಿನ್​ಗಳಿಗೆ ಭೇಟಿನೀಡಿ ಆಹಾರದ ಗುಣಮಟ್ಟವನ್ನ ಪರಿಶೀಲಿಸಿ ಪೋಟೊ ಅಪ್ಲೋಡ್ ಮಾಡ್ಬೇಕು ಎಂದು ನಿಯೋಜಿದ ಅಧಿಕಾರಿಗಳಿಗೆ  ಸೂಚಿಸಲಾಗುವುದು ಎಂದರು.

ಇನ್ನೂ ಪುಟ್ ಪಾತ್ ಮೇಲೆ ಕಸ ಹಾಕುತ್ತಿರುವ ವಿಚಾರ ಪ್ರಸ್ತಾಪಿಸಿದ ಅವರು, ಮಾರ್ಷಲ್ ಗಳು ಈಗಾಗಲೇ ಕಸ ಹಾಕುತ್ತಿರುವವರ ಬಗ್ಗೆ ನಿಗಾ ಇಟ್ಟಿದ್ದಾರೆ. ಪ್ರತಿ ಝೋನ್​ಗೆ ಒಂದು ವಿಶೇಷ ಸ್ಕ್ವಾಡ್ ರಚನೆ ಮಾಡಲಾಗುವುದು ಕಸ, ರಸ್ತೆ ಗುಂಡಿ ,ಬೀದಿ ದೀಪದ ಬಗ್ಗೆ ಈ ತಂಡ ಪರಿಶೀಲನೆ ಮಾಡಲಿದೆ. ವಿವಿಧ ಇಲಾಖೆಯ ಅಧಿಕಾರಿಗಳು‌ ಸ್ಕ್ವಾಡ್ ನಲ್ಲಿರಲಿದ್ದಾರೆ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES