Monday, December 23, 2024

ಕಾರ್ಖಾನೆಯೊಂದರಲ್ಲಿ ಬಾಲ ಕಾರ್ಮಿಕರ ರಕ್ಷಣೆ ಮಾಡಿದ ರಕ್ಷಣಾ ಅಧಿಕಾರಿಗಳು

ತುಮಕೂರು : ಜಿಲ್ಲೆಯ ಹಲವು ಕಾರ್ಖಾನೆಗಳಲ್ಲಿ ಬಾಲ ಕಾರ್ಮಿಕರಿಂದ ಹೀನಾಯವಾಗಿ ಕೆಲಸ ಮಾಡಿಸಿಕೊಳ್ಳುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆ ಯಾವುದೇ ಸೂಚನೆ ನಿಡದೇ ಮಕ್ಕಳ ರಕ್ಷಣಾ ಆಯೋಗ ಸಿಬ್ಬಂದಿ ದಾಳಿಮಾಡಿ ಪರಿಶೀಲಿಸಿ ರಕ್ಷಣೆ ಮಾಡಿದ್ದಾರೆ.

ಇಲ್ಲಿನ ಕಾರ್ಖಾನೆಗಳಲ್ಲಿ ಹೆಚ್ಚಾಗಿ ಬಾಲ ಕಾರ್ಮಿಕರು ಇರುವ ಖಚಿತ ಮಾಹಿತಿ ಮೇರೆಗೆ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣಗೌಡ ನೇತೃತ್ವದ ತಂಡ ತಿಪಟೂರು ನಗರದ ಹೊಸಪಾಳ್ಯ, ಮಂಜುನಾಥ ನಗರ ಮತ್ತು ಆಲೂರ್ ಗೇಟ್ ಗಳಲ್ಲಿರುವ ಎಲ್ಲಾ ಕಾರ್ಖಾನೆಗಳ ಮೇಲೆ ಯಾವುದೇ ಸೂಚನೆ ನೀಡದೆ ದಾಳಿ ಮಾಡಿ ಪರಿಶೀಲನೆ ನೆಡೆಸಿದರು.

ಇದನ್ನು ಓದಿ : ಇಂದಿರ ಕ್ಯಾಂಟೀನ್​ನಲ್ಲಿ ಉಪಹಾರಕ್ಕೆ ಹೆಚ್ಚುವರಿ ಹಣ ವಸೂಲಿ ಆರೋಪ:ಅಧಿಕಾರಿಗಳಿಗೆ ಡಿಕೆಶಿ ಖಡಕ್ ಎಚ್ಚರಿಕೆ

ದಾಳಿಯ ಸುಳಿವು ಸಿಕ್ಕ ಬೆನ್ನಲ್ಲೇ ಇಲ್ಲಿನ ಬಾಲಾಜಿ ಕೊಕೊನಟ್ ಇಂಡಸ್ಟ್ರಿ ಕಾರ್ಖಾನೆಯೊಂದರ ಮಾಲೀಕ ತಮ್ಮ ಕಾರ್ಖಾನೆಯ ಬಾಲ ಕಾರ್ಮಿಕರನ್ನು ಪ್ರತ್ಯೆಕ ಕೊಠಡಿಯಲ್ಲಿ ಕೂಡಿಹಾಕಿದ್ದರು. ಮಕ್ಕಳ ಮತ್ತು ಮಹಿಳೆಯರ ಆರೋಗ್ಯ ದೃಷ್ಟಿಯಿಂದ ಸಮವಸ್ತ್ರ, ಮಸ್ಕ್​ ಸೇರಿದಂತೆ ಯಾವುದೇ ಮೂಲಸೌಕರ್ಯಗಳನ್ನು ನೀಡದೇ ಕಾರ್ಖಾನೆಗಳಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ.

ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರು ಕಾರ್ಮಿಕ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಕೂಡಲೇ ಕಾರ್ಖಾನೆ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಕ್ರೋಶ ವ್ಯಕ್ತ ಪಡಿಸಿದರು.

RELATED ARTICLES

Related Articles

TRENDING ARTICLES