Sunday, December 22, 2024

ನಾಳೆಯಿಂದ ಬಜೆಟ್​ ಮೇಲಿನ ಚರ್ಚೆ ಆರಂಭ: ಬಗೆಹರಿಯದ ವಿಪಕ್ಷ ನಾಯಕನ ಆಯ್ಕೆ ಕಗ್ಗಂಟು!

ಬೆಂಗಳೂರು : ರಾಜ್ಯ ಬಜೆಟ್​​ ಮಂಡನೆಯಾಗಿ ಎರಡು ದಿನಗಳು ಕಳೆದಿದ್ದು ನಾಳೆಯಿಂದ ಬಜೆಟ್ ಮೇಲಿನ ಚರ್ಚೆ ಆರಂಭವಾಗಲಿದೆ. ಇಷ್ಟಾದರೂ ಬಿಜೆಪಿ ಪಕ್ಷಕ್ಕೆ ವಿರೋಧ ಪಕ್ಷದ ನಾಯಕನ ಆಯ್ಕೆ ಇನ್ನೂ ಕಗ್ಗಂಟಾಗಿ ಪರಿಣಮಿಸಿದೆ.

ಇದನ್ನೂ ಓದಿ: ಇಂದಿರ ಕ್ಯಾಂಟೀನ್​ನಲ್ಲಿ ಹೆಚ್ಚುವರಿ ಹಣ ವಸೂಲಿ ಆರೋಪ:ಅಧಿಕಾರಿಗಳಿಗೆ ಡಿಕೆಶಿ ಖಡಕ್ ಎಚ್ಚರಿಕೆ

ವಿರೋಧ ಪಕ್ಷದ ನಾಯಕನಿಲ್ಲದೇ ಸದನಸಲ್ಲಿ ಆಡಳಿತ ಪಕ್ಷದ ತಪ್ಪುಗಳನ್ನು ಗಟ್ಟಿ ಧ್ವನಿಯಿಂದ ಪ್ರಶ್ನಿಸವುದು ಅಷ್ಟು ಸುಲಭವಲ್ಲ, ಸರ್ಕಾರದ ಲೋಪವನ್ನ ಎತ್ತಿ ಹಿಡಿಯಲು ಹೋದರೆ ಕಾಂಗ್ರೆಸ್ ಶಾಸಕರಿಂದ ಬಿಜೆಪಿ ಮೇಲೆ ವಿಪಕ್ಷ ನಾಯಕನ ಬಗ್ಗೆ ಲೇವಡಿ ಮಾಡುವ ಸಾಧ್ಯತೆ ಇದೆ.

ಆಡಳಿತ ಪಕ್ಷವನ್ನು ಪ್ರಶ್ನಿಸುವಾಗ ಎಲ್ಲಾ ಬಿಜೆಪಿ ನಾಯಕರು ಮುಗಿಬಿದ್ದರು ಸಮರ್ಥಿಸಿಕೊಳ್ಳಲು ನಾಯಕನಿಲ್ಲದೆ ಬಿಜೆಪಿಗೆ ಪೀಕಲಾಟ ಪರಿಸ್ಥಿತಿ ಉಂಟಾಗಲಿದೆ, ನಾಳಿನ ಬಜೆಟ್ ಚರ್ಚೆಯಲ್ಲಿ ಆಡಳಿತ ಪಕ್ಷವನ್ನ ಮಣಿಸಲು ಇಂದಾದರೂ ವಿಪಕ್ಷ ನಾಯಕನ ಆಯ್ಕೆ ಮಾಡಲಿದೆಯಾ ಬಿಜೆಪಿ ಹೈಕಮಾಂಡ್​ ಎನ್ನುವುದು ಸದ್ಯದ ಕುತೂಹಲವಾಗಿದೆ.

RELATED ARTICLES

Related Articles

TRENDING ARTICLES