Wednesday, January 22, 2025

ಸುಧಾಕರ್​ಗೆ ಪ್ರದೀಪ್ ಈಶ್ವರ್ ಪ್ರತಿ ಸವಾಲ್

ಚಿಕ್ಕಬಳ್ಳಾಪುರ : ಮಾಜಿ ಸಚಿವ ಡಾ.ಕೆ ಸುಧಾಕರ್ ಅವರ ಚಾಲೆಂಜ್ ಅನ್ನು ಸ್ವೀಕಾರ ಮಾಡಿರುವ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಇದೀಗ ಪ್ರತಿ ಸವಾಲು ಹಾಕಿದ್ದಾರೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಿವೇಶನ ಹಂಚಿಕೆ ಪತ್ರ ವಿಚಾರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಸುಳ್ಳು ಅಭಿಯಾನ ಅರಂಭಿಸಿದ್ದಾರೆ. ಹೀಗಾಗಿ, ಅವರು ಶ್ರೀ ಭೋಗನಂಧೀಶ್ವರ ದೇವಾಲಯಕ್ಕೆ ಬಂದು ದೀಪ ಹಚ್ಚಲಿ ಅಂತ ಮಾಜಿ ಸಚಿವ ಸುಧಾಕರ್ ಸವಾಲು ಹಾಕಿದರು.

ಚಿಕ್ಕಬಳ್ಳಾಪರದಲ್ಲಿ ಮಾತನಾಡಿದ ಅವರು, ಈ ಸವಾಲನ್ನು ನಾನು ಸ್ವೀಕರಿಸುತ್ತೇನೆ. ಆದರೆ, ನನ್ನದೊಂದು ಸವಾಲು ಸಹ ಇದೆ. ಆ ಸವಾಲನ್ನು ಕೂಡ ಡಾ.ಕೆ ಸುಧಾಕರ್ ಸ್ವೀಕಾರ ಮಾಡುವಂತೆ ಪ್ರದೀಪ್ ಈಶ್ವರ್ ಮರು ಸವಾಲು ಹಾಕಿದ್ದಾರೆ.

ಇದನ್ನೂ ಓದಿ : ವಿಪಕ್ಷ ನಾಯಕನ ಸ್ಥಾನಕ್ಕೆ ನೂರಾರು ಕೋಟಿ ಫಿಕ್ಸ್ ಮಾಡಿರಬಹುದು : ಎಂ.ಬಿ ಪಾಟೀಲ್

ಕೋವಿಡ್ ಸಮಯದಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ ಅಂತ ಹೇಳಲಿ. ಶ್ರೀ ಭೋಗನಂಧೀಶ್ವರ ದೇವಾಲಯಕ್ಕೆ ಬಂದು ದೀಪ ಹಚ್ಚಲಿ. ಸುಧಾಕರ್​ ಗೆ ಬರಕ್ಕೆ ಹೇಳಿ ಸರ್.. ಒಟ್ಟಿಗೆ ದೀಪ ಹಚ್ಚೋಣ ಎಂದು ಸವಾಲು ಹಾಕಿದ್ದಾರೆ.

ದೀಪ ಹಚ್ಚಿದ್ರೂ ಹಚ್ಚಬಹುದು ಗಿರಾಕಿ!

ನಾನು ಹಕ್ಕುಪತ್ರಗಳಲ್ಲಿ ಸುಳ್ಳು ಭರವಸೆ ನೀಡಿದ್ರೆ ನಂದಿ ದೇವಸ್ಥಾನದಲ್ಲಿ ದೀಪ ಹಚ್ಚುತ್ತೇನೆ. ತಾಕತ್ತಿದ್ದರೆ ಅದು ಸುಳ್ಳು ಎಂದು ದೀಪ ಹಚ್ಚು ನೋಡೋ‌ಣ. ಹಚ್ಚಿದ್ರೂ ಹಚ್ಚಬಹುದು ಗಿರಾಕಿ! ದ್ವೇಷ ರಾಜಕಾರಣ ಬಿಟ್ಟು ಜಿಲ್ಲೆಯ ಅಭಿವೃದ್ದಿಗೆ ಶ್ರಮವಹಿಸಿ ಎಂದು ಡಾ.ಕೆ ಸುಧಾಕರ್ ಕೌಂಟರ್ ಕೊಟ್ಟಿದ್ದರು.

RELATED ARTICLES

Related Articles

TRENDING ARTICLES