Monday, December 23, 2024

ನಾಪತ್ತೆಯಾಗಿದ್ದ ಜೈನಮುನಿ ಶವವಾಗಿ ಪತ್ತೆ: ಚುರುಕುಗೊಂಡ ಶೋಧಕಾರ್ಯ

ಬೆಳಗಾವಿ: ಮಠದಿಂದ ನಾಪತ್ತೆಯಾಗಿದ್ದ ಹಿರೇಕೋಡಿಯ ಜೈನಮುನಿ ಶವವಾಗಿ ಪತ್ತೆಯಾಗಿದ್ದು ಖಟಕಬಾವಿ ಗ್ರಾಮದ ಗದ್ದೆಯಲ್ಲಿ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ: ವಿಪಕ್ಷ ನಾಯಕ ಸ್ಥಾನಕ್ಕೆ ಹೊಸಮುಖದ ಸುಳಿವು ನೀಡಿದ್ರಾ ಸಿ.ಟಿ ರವಿ?

ಹಣದ ವ್ಯವಹಾರಕ್ಕೆ ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಕೊಲೆ ಮಾಡಿ ಮೃತದೇಹವನ್ನು ತೆರೆದ ಕೊಳವೆಬಾವಿಯಲ್ಲಿ ಎಸೆದ ಬಗ್ಗೆ ಆರೋಪಿಗಳು ಬಾಯ್ಬಿಟ್ಟ ಹಿನ್ನೆಲೆ ಖಟಕಬಾವಿ ಗದ್ದೆಯಲ್ಲಿ ಜೈನಮುನಿಗಳ ಮೃತದೇಹಕ್ಕಾಗಿ ಶೋಧ ಕಾರ್ಯನಡೆಸಲಾಗುತ್ತಿದೆ.

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಖಟಕಬಾವಿ ಗ್ರಾಮ ಗದ್ದೆಗೆ ತೆರಳುವ ಎರಡು ಬದಿಯಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರ ಬಂದ್ ಮಾಡಿ  ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಘಟನಾ ಸ್ಥಳದಲ್ಲಿ ಸಾರ್ವಜನಿಕರು, ಮಾಧ್ಯಮಗಳಿಗೆ ನಿರ್ಬಂಧಿಸಿದ್ದು ಜಿಲ್ಲಾ ಎಸ್ ಪಿ ಡಾ.ಸಂಜೀವ್ ಪಾಟೀಲ್ ಸ್ಥಳದಲ್ಲೇ ಮೊಕ್ಕಾಂ ಹೂಡಿ SDRF ತಂಡ ಹಾಗೂ ಫಾರೆನಸಿಕ್ ತಂಡ ಕರೆಸಿ ತನಿಖೆ ಚುರುಕುಗೊಳಿಸಿದ್ದಾರೆ.

RELATED ARTICLES

Related Articles

TRENDING ARTICLES