Thursday, April 3, 2025

ಪೆನ್ ಡ್ರೈವ್ ಹೆಸರಲ್ಲಿ ಕುಮಾರಸ್ವಾಮಿ ದಂಧೆ : ಕೆ.ಎನ್ ರಾಜಣ್ಣ ಸ್ಫೋಟಕ ಹೇಳಿಕೆ

ಮೈಸೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಪೆನ್ ಡ್ರೈವ್ ಹೆಸರಲ್ಲಿ ದಂಧೆ ಮಾಡುತ್ತಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಸ್ಫೋಟಕ ಹೇಳಿಕೆ ನೀಡಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಕತ್ ಇದ್ರೆ ಈಗಲೇ ಪೆನ್ ಡ್ರೈವ್ ನಲ್ಲಿ ಏನಿದೆ ಅಂತ ತೋರಿಸಲಿ ಎಂದು ಸವಾಲು ಹಾಕಿದರು.

ಪೆನ್ ಡ್ರೈವ್ ಇಟ್ಕೊಂಡು ಅವರು ಏನಾದ್ರೂ ದಂಧೆ ಮಾಡ್ತಾ ಇದ್ದಾರಾ? ವಿಳಂಬ ಮಾಡುತ್ತಿರುವುದರ ಹಿಂದಿನ ಉದ್ದೇಶ ಏನು? ನನಗೆ ಆ ಪೆನ್ ಡ್ರೈವ್ ವಿಚಾರದಲ್ಲಿ ಯಾವುದೇ ಕುತೂಹಲ ಇಲ್ಲ. ಹಳ್ಳಿ ಜಾತ್ರೆಗಳಲ್ಲಿ ಬುಟ್ಟಿ ಹಿಡ್ಕೊಂಡು ಹಾವಿದೆ..! ಹಾವಿದೆ..! ಅಂತ ಹೇಳ್ತಾರೆ. ಬುಟ್ಟಿಯಲ್ಲಿ ಯಾವ ಹಾವೂ ಇರುವುದಿಲ್ಲ ಎಂದು ಕುಟುಕಿದರು.

ಇದನ್ನೂ ಓದಿ : ಈಶ್ವರಪ್ಪ ಲೂಟಿ ಮಾಡಿ ಮಂತ್ರಿಗಿರಿ ಕಳೆದುಕೊಂಡರು : ಹೆಚ್. ವಿಶ್ವನಾಥ್

ಬ್ಲಾಕ್ ಮೇಲ್ ಅಂತ ಹೇಳುವುದಿಲ್ಲ‌

ಪೆನ್ ಡ್ರೈವ್ ಹಿಡ್ಕೊಂಡು ಸುಮ್ಮನೆ ಓಡಾಡುತ್ತಿದ್ದಾರೆ. ಒಂದು ವೇಳೆ ಪೆನ್ ಡ್ರೈವ್ ನಲ್ಲಿ ಅಂತಹ ಮಹತ್ವದ ವಿಚಾರ ಇದ್ರೆ ತಡ ಯಾಕೆ. ನಾನು ಇದನ್ನು ಬ್ಲಾಕ್ ಮೇಲ್ ಅಂತ ಹೇಳುವುದಿಲ್ಲ‌. ಮುಂದೆ ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿಗೆ ಕೆ.ಎನ್ ರಾಜಣ್ಣ ತಿರುಗೇಟು ಕೊಟ್ಟರು.

ವೈಎಸ್‌ಟಿ ಅಂದ್ರೆ ಏನಂತ ಗೊತ್ತಿಲ್ಲ

ವರ್ಗಾವಣೆಯಾಗುತ್ತಿದೆ ಅಂದರೆ ದಂಧೆಯಲ್ಲ. ವರ್ಗಾವಣೆ ಅವರ ಸರ್ಕಾರವಿದ್ದಾಗ ಆಗಿರಲಿಲ್ವಾ? ಎಲ್ಲಾ ಕಾಲಕ್ಕೂ ವರ್ಗಾವಣೆ ನಡೆಯುತ್ತದೆ. ಅದನ್ನು ದಂಧೆ ಅನ್ನೋದು ತಪ್ಪು. ವೈಎಸ್‌ಟಿ ಟ್ಯಾಕ್ಸ್ ಅಂದ್ರೆ ಏನು ಅಂತ ನಂಗೆ ಗೊತ್ತಿಲ್ಲ. ಅವ್ರನ್ನೇ ಕೇಳಬೇಕು ಎಂದು ಛೇಡಿಸಿದರು.

RELATED ARTICLES

Related Articles

TRENDING ARTICLES