Friday, May 17, 2024

ನಿರ್ಮಾಪಕ ಕುಮಾರ್ ವಿರುದ್ಧ ಸಿಡಿದೆದ್ದ ಕಿಚ್ಚ : 10 ಕೋಟಿ ಮಾನನಷ್ಟದ ಲೀಗಲ್ ನೋಟಿಸ್ ಕೊಟ್ಟ ಸುದೀಪ್

ಬೆಂಗಳೂರು: ಕೆಲ ದಿನಗಳ ಹಿಂದೆ ನಿರ್ಮಾಪಕ ಎಂ.ಎನ್ ಕುಮಾರ್ ಅವರು ನಟ ಸುದೀಪ್ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದರು ಅದರೆ ಈಗ ಕಿಚ್ಚ ಸುದೀಪ್ ಅವರು ವಕೀಲರ ಮೂಲಕ ಎಂ ಎನ್ ಕುಮಾರ್‌ಗೆ ಲೀಗಲ್ ನೋಟೀಸ್ ನೀಡಿದ್ದಾರೆ.

ಹೌದು, ಕಿಚ್ಚ ಸುದೀಪ್​ ಕಳೆದ 8 ವರ್ಷದ ಹಿಂದೆ ನಟ ಕಿಚ್ಚ ಸುದೀಪ್ ಅವರು ಹಣ ಪಡೆದು ಸಿನಿಮಾ ಮಾಡಿ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಬಂದು ನಿರ್ಮಾಪಕ ಎಂ ಎನ್ ಕುಮಾರ್ ಆರೋಪ ಮಾಡಿದ್ದರು. ಈಗ ಕಿಚ್ಚ ಸುದೀಪ್ ಅವರು ವಕೀಲರ ಮೂಲಕ ನೋಟೀಸ್ ನೀಡಿದ್ದಾರೆ.

ಇದನ್ನೂ ಓದಿ: ವಿವಾಹ ವಾರ್ಷಿಕೋತ್ಸವ ದಿನದಂದೇ ಸ್ನೇಹಿತನನ್ನು ಹತ್ಯೆಗೈದ ಕಿರಾತಕರು

 ಮಾನನಷ್ಟ ಮೊಕದ್ದಮೆಯಲ್ಲಿ ಏನಿದೆ? 

ಎಂ ಎನ್ ಕುಮಾರ್ ಮಾಡಿರುವ ಎಲ್ಲ ಆರೋಪಗಳು ಸುಳ್ಳು, ಆಧಾರರಹಿತವಾಗಿವೆ. ನನ್ನ ಮೇಲೆ ಕುಮಾರ್ ಅವರು ಇಲ್ಲಸಲ್ಲದ ಆರೋಪ ಮಾಡಿ ತೇಜೋವಧೆ ಮಾಡಿದ್ದಾರೆ. ಕುಮಾರ್ ಅವರು ನನ್ನ ಮೇಲೆ ಮಾಡಿದ ಆರೋಪಗಳನ್ನು ಸಾಬೀತುಪಡಿಸಲಿ. ನೋಟೀಸ್ ಸಿಕ್ಕಿ ಮೂರು ದಿನಗಳ ಒಳಗೆ ಮಾಧ್ಯಮದ ಮುಂದೆ ಕ್ಷಮೆ ಕೇಳಬೇಕು ಇಲ್ಲವಾದರೆ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹಣ ಸಲ್ಲಿಸಲಿ” ಎಂದು ನೋಟಿಸ್‌ನಲ್ಲಿವೆ.

ಐಪಿಸಿ ಸೆಕ್ಷನ್ 499, 500 ಅಡಿಯಲ್ಲಿ ಎಂ ಎನ್ ಕುಮಾರ್ ವಿರುದ್ಧ ದೂರು ದಾಖಲಾಗಿದೆ.

 

 

RELATED ARTICLES

Related Articles

TRENDING ARTICLES