Wednesday, January 22, 2025

ಹೆಚ್​ಡಿಕೆ ನೋಡಿ ನಗಬೇಕೋ, ಅಳಬೇಕೋ ಗೊತ್ತಿಲ್ಲ : ಮತ್ತೆ ಪಂಚ್ ಕೊಟ್ಟ ಚಲುವರಾಯಸ್ವಾಮಿ

ಬೆಂಗಳೂರು : ರಾಜ್ಯ ಬಜೆಟ್ ಬಗ್ಗೆ ಲೇವಡಿ ಮಾಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮತ್ತೆ ಕೌಂಟರ್ ಕೊಟ್ಟರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಪರಿಷ್ಕರಣಾ ಬಜೆಟ್. ಯಾರೇ ಆ ಸ್ಥಾನದಲ್ಲಿದ್ರು ಸಿಎಂ ಬಜೆಟ್ ಕೊಡಲು ಸಾಧ್ಯವಿಲ್ಲ. ಎಲ್ಲರೂ ಒಪ್ಪುತ್ತಾರೆ ಎಂದರು.

ವಿರೋಧ ಪಕ್ಷದವರು ಟೀಕಿಸುವುದು ಸರ್ವೇ ಸಾಮಾನ್ಯ. ನಾವು ಅನೇಕ ಇಲಾಖೆಗಳಲ್ಲಿ ಹಲವು ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ನಮ್ಮ ಇಲಾಖೆ(ಕೃಷಿ ಇಲಾಖೆ)ಯಲ್ಲಿ ನಂದಿನಿ ಬ್ರಾಂಡ್ ಮಾಡಲು ನಿರ್ಧರಿಸಲಾಗಿದೆ. ಇದು ರೈತರಿಗೆ ವರದಾನವಾಗಲಿದೆ ಎಂದು ಹೇಳಿದರು.

ಇದನ್ನೂ ಓದಿ : ಪ್ರೌಢಶಾಲಾ ಮಕ್ಕಳಿಗೆ ಇನ್ನುಮುಂದೆ ಮೊಟ್ಟೆ ಭಾಗ್ಯ

ಸದನದಲ್ಲಿ ಕೂತು ಬಜೆಟ್ ಕೇಳಿಲ್ಲ

ಇದು ಚೆಂಡು ಹೂ ಮುಡಿಸುವ ಬಜೆಟ್ ಎಂದು ಕುಟುಕಿದರುವ ದಳಪತಿಗೆ ತಿರುಗೇಟು ಕೊಟ್ಟ ಅವರು, ಹೆಚ್​ಡಿಕೆ ಸದನದಲ್ಲಿ ಕೂತು ಬಜೆಟ್ ಕೇಳಿಲ್ಲ. ಅವರು ಇಲ್ಲಿದ್ದು ಹೇಳಿದ್ದು ಸೂಕ್ತವಾ? ಹೊರಗಡೆ ಕೂತು ಹೇಳುತ್ತಿರುವುದು ಸೂಕ್ತವಾ? ಅವರು ಬಜೆಟ್​ಗೆ ಬಂದಿಲ್ಲ. ಅವರ ಹೇಳಿಕೆಗೆ ನಗಬೇಕೋ? ಅಳಬೇಕೋ? ಗೊತ್ತಿಲ್ಲ ಎಂದು ಕುಟುಕಿದರು.

RELATED ARTICLES

Related Articles

TRENDING ARTICLES