ಬೆಂಗಳೂರು : ಪ್ರಧಾನಿ ಯಾರೇ ಆಗಲಿ, ಹೆಂಡತಿ ಇಲ್ಲದೆ ಇರಬಾರದು ಎಂದು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಎಂದೇ ಹೇಳಲಾಗುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮದುವೆಯಾಗುವಂತೆ ಸಲಹೆ ನೀಡಿರುವ ಬಗ್ಗೆ ಪ್ರಶ್ನಿಸಿದಾಗ, ಲಾಲು ಪ್ರಸಾದ್ ಯಾದವ್ ಈ ರೀತಿ ಹೇಳಿಕೆ ನೀಡಿದ್ದಾರೆ.
ಪತ್ನಿ ಇಲ್ಲದೆ ಪ್ರಧಾನಿ ನಿವಾಸದಲ್ಲಿ ಇರುವುದು ತಪ್ಪು. ಅಂತಹವರನ್ನು ತಕ್ಷಣ ಪ್ರಧಾನಿ ನಿವಾಸದಿಂದ ತೊಲಗಿಸಬೇಕು ಎಂದು ಲಾಲು ಪ್ರಸಾದ್ ಯಾದವ್ ತಿಳಿಸಿದ್ದಾರೆ.
ಇದನ್ನೂ ಓದಿ : ನಮ್ಮ ಡಿಸಿಎಂ ಸಾರ್ವಕಾಲಿಕ ಸತ್ಯ ಹೇಳಿದ್ದಾರೆ : ಬೊಮ್ಮಾಯಿ ಕೌಂಟರ್
300ಕ್ಕೂ ಹೆಚ್ಚು ಸ್ಥಾನ ಗೆಲ್ತೀವಿ
ಇನ್ನೂ ಮುಂಬರುವ ಲೋಕಸಭಾ ಚುನಾವಣೆ ಕುರಿತು ಮಾತನಾಡಿದ್ದು, 2024ರಲ್ಲಿ ಪ್ರತಿಪಕ್ಷಗಳ ಮೈತ್ರಿ ಕೂಟ ಕನಿಷ್ಠ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಇತ್ತೀಚೆಗೆ ಪಾಟ್ನಾದಲ್ಲಿ ನಡೆದಿದ್ದ ಪ್ರತಿಪಕ್ಷಗಳ ಒಕ್ಕೂಟ ಸಭೆಯಲ್ಲಿ ಲಾಲು ಪ್ರಸಾದ್ ಅವರು ರಾಹುಲ್ ಗಾಂಧಿಗೆ ಫಸ್ಟ್ ನೀವು ಮ್ಯಾರೇಜ್ ಆಗಬೇಕು ಎಂದು ಎಲ್ಲರ ಸಮ್ಮುಖದಲ್ಲಿ ಹೇಳಿದ್ದರು.