ಬೆಂಗಳೂರು: ಸ್ಪೀಕರ್ ಅವರೇ ನಮಗೆ ನಿಮ್ಮ ಭಾಷೆ ಅರ್ಥವಾಗಬೇಕು ಅದಕ್ಕೆ ಒಂದು ಆ್ಯಪ್ ಹಾಕಿಕೊಡಿ ಆಗ ಕನ್ನಡ ಭಾಷೆ ಅರ್ಥವಾಗುತ್ತೆ ಎಂದು ಶಾಸಕ ಯತ್ನಾಳ್ ಸದನದಲ್ಲಿ ಸಭಾಧ್ಯಕ್ಷ ಖಾದರ್ರ ಕಾಲೆಳೆದರು.
ಇದನ್ನೂ ಓದಿ: ಜಮೀನಿಗಾಗಿ ಸಹೋದರರ ಗಲಾಟೆ : ಎರಡು ಗುಂಪುಗಳ ನಡುವೆ ಮಾರಾಮಾರಿ
ರಾಜ್ಯ ವಿಧಾನಸೌಧ ಕಲಾಪದಲ್ಲಿ ಸಭಾಧ್ಯಕ್ಷ ಯು.ಟಿ ಖಾದರ್ ಕನ್ನಡ ಮಾತನಾಡುವ ಕುರಿತು ಸ್ವಾರಸ್ಯಕರ ಚರ್ಚೆನಡೆಸಿದರು ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಸ್ಪೀಕರ್ ಯು.ಟಿ ಖಾದರ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪದೇ ಪದೆ ನನ್ನ ಕನ್ನಡ ಭಾಷೆಯನ್ನು ಸರಿಪಡಿಸ್ತಾರೆ. ನನ್ನ ಕನ್ನಡ ಭಾಷೆ ಹೆಚ್ಚು ಕಡಿಮೆ ಇರಬಹುದು, ಆದರೆ ಅದು ನಮ್ಮ ಪ್ರೀತಿಯ ಭಾಷೆ. ಪ್ರೀತಿ, ಸೋದರತೆ ಸಾಮರಸ್ಯದ ಭಾಷೆಯಾಗಿದೆ. ಅದಕ್ಕೆ ಕೃತಜ್ಞತೆ ಹೇಳುತ್ತಿದ್ದೇನೆ ಎಂದು ಸ್ಪೀಕರ್ ಹೇಳಿದ್ದಾರೆ.
ಇದಕ್ಕೆ ಶಾಸಕ ಯತ್ನಾಳ್ ಪ್ರತಿಕ್ರಿಯಿಸಿ ಸ್ಪೀಕರ್ ಅವರೇ ನಮಗೆ ನಿಮ್ಮ ಭಾಷೆ ಅರ್ಥವಾಗಬೇಕು. ಅದಕ್ಕೆ ಆ್ಯಪ್ ಹಾಕಿಕೊಡಿ, ಆಗ ಕನ್ನಡ ಭಾಷೆ ಅರ್ಥವಾಗುತ್ತೆ ಎಂದಿದ್ದಾರೆ. ಮೊಬೈಲ್‌ನಲ್ಲಿ US ಇಂಗ್ಲಿಷ್, ಇಂಗ್ಲೆಂಡ್ ಇಂಗ್ಲಿಷ್ ಇದ್ದ ಹಾಗೆ ಸ್ಪೀಕರ್ ಟು ಕನ್ನಡ ಮಾಡಿ ಎಂದು ಯತ್ನಾಳ್ ಕಾಲೆಳೆದಿದ್ದಾರೆ.