ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸದೇ ಭಕ್ತರ ಜೀವದೊಟ್ಟಿಗೆ ಚೆಲ್ಲಾಟ ಆಡುತ್ತಿದ್ದ ಪ್ರಾಧಿಕಾರದ ಕುರಿತು ಪವರ್ ಟಿವಿ ವರದಿ ಮಾಡಿದ ಬೆನ್ನಲ್ಲೇ ಎಚ್ಚೆತ್ತ ಪ್ರಾಧಿಕಾರ ನಾಲ್ಕು ಬಸ್ಗಳಿಗೆ ಇಂದು ಚಾಲನೆ ನಿಡಿದೆ.
ಇದನ್ನೂ ಓದಿ: KGF ಮೀರಿಸೋ ತಂತ್ರಜ್ಞಾನ, 200 ಕೋಟಿ ಬಜೆಟ್ ; 4K ಐಮ್ಯಾಕ್ಸ್-ಡಾರ್ಕ್ ಸೆಂಟ್ರಿಕ್ ಥೀಮ್ನ ಫಸ್ಟ್ ಇಂಡಿಯನ್ ಮೂವಿ ‘ಸಲಾರ್’
ರಾಜ್ಯದ ಪ್ರಮುಖ ಯಾತ್ರಸ್ಥಳವಾದ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರದ ಆವರಣದಲ್ಲಿ ಇಂದು 4 ನೂತನ ಬಸ್ಗಳಿಗೆ ಸಾಲೂರು ಮಠದ ಶ್ರೀಗಳು ಹಸಿರು ನಿಶಾನೆ ತೋರುವ ಮೂಲಕ ಭಕ್ತರ ಸೇವೆಗೆ ಲೋಕಾರ್ಪಣೆ ಮಾಡಿದ್ದಾರೆ.
ಕಳೆದ ಜೂನ್ 23 ರಂದು ನಮ್ಮ ಪವರ್ ಟಿವಿಯಲ್ಲಿ ಮಾಹದೇಶ್ವರ ಬೆಟ್ಟದ ರಸ್ತೆ ಮಾರ್ಗದಲ್ಲಿ ಸವೆದುಹೋದ ಬಸ್ ಟಯರ್ಗಳು, ಸಮರ್ಪಕವಾಗಿ ನಿರ್ವಹಣೆ ಮಾಡದ ಬಸ್ಗಳ ಮೂಲಕ ಕ್ಷೇತ್ರಕ್ಕೆ ಬರುವ ಮಾದಪ್ಪನ ಭಕ್ತರ ಜೊತೆ ಪ್ರಾಧಿಕಾರ ಚೆಲ್ಲಾಟ ಆಡುತ್ತಿರುವ ಕುರಿತು ವಿಸ್ತ್ರತವಾಗಿ ವರದಿ ಮಾಡಿತ್ತು.
ಬಸ್ ಖರೀದಿ ಮಾಡಿ 4-5 ತಿಂಗಳಾದರೂ ಸೇವೆಗೆ ನೀಡದೇ ಡಕೋಟಾ ಬಸ್ ಗಳನ್ನೇ ಓಡಿಸುತ್ತಿದ್ದರ ಸಂಬಂಧ ವರದಿ ಬಿತ್ತರಿಸಿ ಗಮನ ಸೆಳೆದಿತ್ತು. ಇದರಿಂದ ಎಚ್ಚೆತ್ತ ಪ್ರಾಧಿಕಾರ ಇದೀಗ ಚಾಸಿ ನೆಪವೊಡ್ಡಿ ನಿಂತ್ತಿದ್ದ ಹೊಸ 4 ಬಸ್ ಗಳನ್ನು ತರಿಸಿ ಬೆಂಗಳೂರು, ಚಾಮರಾಜನಗರ ಮಾರ್ಗದಲ್ಲಿನ ಭಕ್ತರ ಓಡಾಟಕ್ಕೆ ಮುಕ್ತಗೊಳಿಸಿದೆ.