ಮಂಡ್ಯ : ಮೈಶುಗರ್ ನಲ್ಲಿ ಕೆಲವು ಸಮಸ್ಯೆ ಮತ್ತು ಗೊಂದಲವಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಅರೆಯುವಿಕೆಗೆ ಚಾಲನೆ ನೀಡಿರೋದಕ್ಕೆ ನನ್ನ ಸ್ವಾಗತವಿದೆ ಎಂದರು.
ಹೊಸದಾಗಿ ಕಾರ್ಖಾನೆ ಪ್ರಾರಂಭಿಸಿದಾಗ ಸಮಸ್ಯೆಗಳು ಇದ್ದೆ ಇರುತ್ತದೆ. ಅದನ್ನು ಸರಿಪಡಿಸಿಕೊಳ್ಳಬೇಕು. ಮೈಶುಗರ್ ನಲ್ಲಿ ಕೆಲವು ಸಮಸ್ಯೆ ಮತ್ತು ಗೊಂದಲವಿದೆ. ಅವುಗಳನ್ನ ಸರಿಪಡಿಸಿಕೊಂಡು ಹೋದರೆ, ಮುಂದೆ ಯಾವುದೇ ಸಮಸ್ಯೆ ಇರಲ್ಲ. 40 ಕೋಟಿ ಕರೆಂಟ್ ಬಿಲ್ ಬಾಕಿಯ ಬಗ್ಗೆ ಕೇಂದ್ರದ ಇಂಧನ ಸಚಿವರಿಗೆ ಪತ್ರ ಬರೆದು ಮನ್ನ ಮಾಡುವಂತೆ ಮನವಿ ಮಾಡ್ತೀನಿ ಎಂದು ಹೇಳಿದರು.
ಇದನ್ನೂ ಓದಿ : ನಮ್ಮ ಡಿಸಿಎಂ ಸಾರ್ವಕಾಲಿಕ ಸತ್ಯ ಹೇಳಿದ್ದಾರೆ : ಬೊಮ್ಮಾಯಿ ಕೌಂಟರ್
ಕೆಆರ್ ಎಸ್ ವೀಕ್ಷಣೆ ಮಾಡ್ತೀನಿ
ಕೆಆರ್ ಎಸ್ (KRS) ಡ್ಯಾಂ ವೀಕ್ಷಣೆ ವಿಚಾರ ಕುರಿತು ಮಾತನಾಡಿದ ಸಂಸದೆ ಸುಮಲತಾ, ಡ್ಯಾಂ ಬಿರುಕು ಬಿಟ್ಟಿರುವ ಬಗ್ಗೆ ನಾನು ವೀಕ್ಷಣೆ ಮಾಡುತ್ತಿಲ್ಲ. ಇತ್ತೀಚೆಗೆ ಮಳೆ ಕಡಿಮೆ ಆಗಿ ಡ್ಯಾಂನಲ್ಲಿ ನೀರಿನ ಕೊರತೆ ಇದೆ. ಡ್ಯಾಂನ ನೀರಿನ ಮಟ್ಟ ಹಾಗೂ ಕುಡಿಯುವ ನೀರಿನ ಬಗ್ಗೆ ಭೇಟಿ ಮಾಡುತ್ತಿದ್ದೇನೆ. ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲು ತೆರೆಳುತ್ತಿದ್ದೇನೆ ಎಂದು ಮಾಹಿತಿ ನೀಡಿದರು.