ಬೆಂಗಳೂರು : ಕೆಎಸ್ಸಾರ್ಟಿಸಿ ಬಸ್ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ ಬಗ್ಗೆ ನಡೆದ ಚರ್ಚೆ ವೇಳೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಬೆಂಕಿಯುಗುಳಿದರು.
ವಿಧಾನಸಭೆಯಲ್ಲಿ ಬಸ್ ಚಾಲಕ ಜಗದೀಶ್ ಆತ್ಮಹತ್ಯೆ ಯತ್ನ ವಿಷಯ ಪ್ರಸ್ತಾಪಿಸಿದ ಚಲುವರಾಯಸ್ವಾಮಿ, ಇಷ್ಟೊಂದು ಹತಾಶರಾಗಬೇಡಿ ಎಂದು ಕುಮಾರಸ್ವಾಮಿಗೆ ಕುಟುಕಿದರು. ಇದರಿಂದ ಕೆರಳಿದ ದಳಪತಿ, ಯಾರು ಹತಾಶರಾಗಿರುವುದು ಅಂತ ಸಿಡಿಮಿಡಿಗೊಂಡರು.
ನಿಮ್ಮದು ಗೊತ್ತಿದೆ ಕುಳಿತುಕೊಳ್ಳಿ
ಈ ವೇಳೆ ಚಲುವಾರಯಸ್ವಾಮಿ, ಪಂಚಾಯಿತಿ ಲೆವೆಲ್ನಲ್ಲಿ ರಾಜಕೀಯ ಮಾಡುತ್ತಿರುವವರು ನೀವು. ‘ನಿಮಗೆ ನಾಚಿಕೆಯಾಗಬೇಕು’ ಅಂದರು. ಈ ಮಾತು ಕೇಳಿಸಿಕೊಂಡು ಫುಲ್ ಗರಂ ಆದ ಕುಮಾರಸ್ವಾಮಿ, ನಮಗೆ ಯಾಕೆ ನಾಚಿಕೆ ಆಗ್ಬೇಕು.. ಕೂತ್ಕೋಳಯ್ಯ.. ನಿಮ್ಮದು ಗೊತ್ತಿದೆ ಕುಳಿತುಕೊಳ್ಳಿ. ನಾಚಿಕೆ ಆಗುವಂಥದ್ದು ನಾನೇನು ಮಾಡಿಲ್ಲ, ಮಾಡಿಕೊಂಡಿದ್ದು ನೀವು ಎಂದು ಗರಂ ಆದರು.
ಇದನ್ನೂ ಓದಿ : ನಮ್ಮ ಡಿಸಿಎಂ ಸಾರ್ವಕಾಲಿಕ ಸತ್ಯ ಹೇಳಿದ್ದಾರೆ : ಬೊಮ್ಮಾಯಿ ಕೌಂಟರ್
ಅನಾವಶ್ಯಕವಾಗಿ ನಮ್ಮನ್ನು ತೇಜೋವಾದಿ ಮಾಡೋದನ್ನು ಬಿಡಬೇಕು. ಅಧಿಕಾರ ಇಲ್ಲದಾಗ ಇವ್ರು ಒಬ್ಬರ ಮೇಲೆ ಇಲ್ಲಸಲ್ಲದ ಮಾತಾಡೋದನ್ನು ಬಿಡಬೇಕು. ನನ್ನ ಬಳಿ ಸಿಡಿ ಇದೆ, ಅದು ಇದೆ ಅನ್ನೋದನ್ನು ಬಿಡಬೇಕು ಎಂದು ಪೆನ್ ಡ್ರೈವ್ ಬಾಂಬ್ ಬಗ್ಗೆ ಚಲುವರಾಯಸ್ವಾಮಿ ಆಕ್ರೋಶ ಹೊರಹಾಕಿದರು.