Monday, December 23, 2024

5 ಕೆಜಿ ಅಕ್ಕಿ ದುಡ್ಡು.. ರಾಜ್ಯ ಸರ್ಕಾರ ಅಧಿಕೃತ ಆದೇಶ

ಬೆಂಗಳೂರು : ಅನ್ನಭಾಗ್ಯ ಯೋಜನೆಯಡಿ 5 ಕಿಲೋ ಅಕ್ಕಿ ಬದಲಿಗೆ ದುಡ್ಡು ವರ್ಗಾವಣೆ ಮಾಡುವಂತೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಪಡಿತರ ಚೀಟಿದಾರರಿಗೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ವಿತರಿಸಲಾಗುವ 5 ಕಿಲೋ ಆಹಾರ ಧಾನ್ಯದೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ 5ಕಿಲೋ ಆಹಾರ ಧಾನ್ಯವನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ.

ಆಹಾರ ಧಾನ್ಯ ಖರೀದಿಗೆ ಟೆಂಡರ್ ಕರೆಯಲಾಗಿದ್ದು, ಆಹಾರ ಧಾನ್ಯ ನೀಡುವವರೆಗೂ ಕಿಲೋಗೆ 34 ರೂ.ನಂತೆ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಐ(DBT) ಮೂಲಕ ಹಣ ವರ್ಗಾಯಿಸಲು ಆದೇಶಿಸಿದೆ.

ಇದ್ನೂ ಓದಿ : ಅಕ್ಕಿ ಬದಲು ದುಡ್ಡು, ಸರ್ಕಾರ ಬೊಕ್ಕಸಕ್ಕೆ 123 ಕೋಟಿ ಉಳಿತಾಯ!

ಇಕೆವೈಸಿ ಆಗಿಲ್ಲ ಅಂದ್ರೆ ಹಣ ಡೌಟು

ಮೂರು ತಿಂಗಳಿಂದ ಅಕ್ಕಿ ತಗೊಂಡಿಲ್ಲದ ಬಿಪಿಎಲ್ ಕಾರ್ಡ್ ದಾರರಿಗೆ ಹಣ ನೀಡುವ ವಿಚಾರದ ಬಗ್ಗೆ ಚರ್ಚೆ ಆಗುತ್ತಿದೆ. ನಾಳೆ ಇವರಿಗೆ ಹಣ ನೀಡಬೇಕಾ? ಬೇಡವೇ? ಎಂಬ ವಿಚಾರ ತಿಳಿಯುತ್ತದೆ ಎಂದು ಆಹಾರ ಇಲಾಖೆ ಎಂ.ಡಿ ಗ್ಯಾನೇಂದ್ರ ಪವರ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಜುಲೈ 10ನೇ ತಾರೀಕಿನೊಳಗೆ 5 ಕಿಲೋ ಅಕ್ಕಿ ಹಣ ಫಲಾನುಭವಿಗಳ ಖಾತೆಗೆ ಹೋಗುತ್ತದೆ. ರಾಜ್ಯದಲ್ಲಿ ಒಟ್ಟು 1 ಕೋಟಿ 28 ಲಕ್ಷದ 23 ಸಾವಿರದ 868 ಜನ ಬಿಪಿಎಲ್ ಕಾರ್ಡ್ ದಾರರು ಇದ್ದಾರೆ. 3 ಸಾವಿರ ಕಾರ್ಡ್ ಅಲ್ಲಿ ಆಧಾರ್ ಜೋಡಣೆ ಆಗಿಲ್ಲ. ಇಕೆವೈಸಿ ಆಗಿಲ್ಲ ಅಂದ್ರೆ ಹಣ ಡೆಬಿಟ್ ಆಗೋದು ಕಷ್ಟ ಎಂದು ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES