Wednesday, January 22, 2025

ಶಾಲಾ ಸಮವಸ್ತ್ರ ಗುತ್ತಿಗೆ ಮಹಾರಾಷ್ಟ್ರಕ್ಕೆ ನೀಡಿ ರಾಜ್ಯಕ್ಕೆ ಅನ್ಯಾಯ: ಕರವೇ ಪ್ರವೀಣ್ ಶೆಟ್ಟಿ

ಬೆಂಗಳೂರು : ಶಾಲಾ ಸಮವಸ್ತ್ರ ತಯಾರಿಕೆ ಗುತ್ತಿಗೆಯನ್ನು ಸರ್ಕಾರ ಈ ಬಾರಿ ಮಹಾರಾಷ್ಟ್ರ ಕಂಪೆನಿಗೆ ನೀಡಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಇಂದು ಮನ್ಮುಲ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಈ ಕುರಿತು ವೀಡಿಯೋ ಮಾಡಿ ಮಾತನಾಡಿರುವ ಅವರು, ಸರ್ಕಾರಿ ಶಾಲಾ ಮಕ್ಕಳ ಸಮವಸ್ತ್ರ ಗುತ್ತಿಗೆಯನ್ನು ಪ್ರತಿವರ್ಷ ಶಿಕ್ಷಣ ಇಲಾಖೆಯು ಕರ್ನಾಟಕ ಕೈ ಮಗ್ಗ ಅಭಿವೃದ್ದಿ ನಿಗಮಕ್ಕೆ ನೀಡುತ್ತಿತ್ತು ಆದರೇ ಈ ವರ್ಷ ಮಹಾರಾಷ್ಟ್ರದ ವಿಲಾಪ್ ಜೈನ್ ಸಂಸ್ಥೆಗೆ ಗುತ್ತಿಗೆ ನೀಡಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ.

ಕಾಲ್ಕೆರೆದು ಜಗಳಕ್ಕೆ ಬರುವ ಮಹಾರಾಷ್ಟ್ರಕ್ಕೆ ಗುತ್ತಿಗೆ ನೀಡಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ಕೂಡಲೇ ವಿಲಾಪ್ ಜೈನ್ ಗುತ್ತಿಗೆಯನ್ನು ವಾಪಸ್ ಪಡೆದು ಕರ್ನಾಟಕ ಕೈ ಮಗ್ಗಕ್ಕೆ ನೀಡಬೇಕು ಇಲ್ಲವಾದರೇ ಪ್ರತಿಭಟನೆ ಮಾಡುವುದಾಗಿ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES