Sunday, December 22, 2024

Gajanan Sankashti 2023: ಆಷಾಢ ಮಾಸದಲ್ಲಿ ಗಜಾನನ ಅನುಗ್ರಹಕ್ಕೆ ಈ ವ್ರತ ಮಾಡಬೇಕು

ಸಂಕಷ್ಟ ಚತುರ್ಥಿ ತೊಂದರೆಗಳನ್ನು ನಾಶ ಮಾಡುವ ವ್ರತ. ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ಥಿಯನ್ನು ಸಂಕಷ್ಟ ಚತುರ್ಥಿ ಅಂತ ಕರೆಯಲಾಗುತ್ತೆ‌. ಇನ್ನೂ ಆಷಾಢ ಮಾಸದಲ್ಲಿ ಗಜಾನನ ಸಂಕಷ್ಟ ಚತುರ್ಥಿ ಅಂತ ಕರೆಯುವರು.

ಆಷಾಢದಲ್ಲಿ ಆಚರಿಸುವ ಗಜಾನನ ಸಂಕಷ್ಟ ಚತುರ್ಥಿ ಮಹತ್ವ ಏನು? ಯಾವಾಗ ವ್ರತ ಆಚರಿಸಲಾಗುತ್ತದೆ ಹಾಗೂ ಪೂಜಾ ವಿಧಿ ವಿಧಾನಗಳ ಬಗ್ಗೆ ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಪವರ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ವಾರಾಹಿ ನವರಾತ್ರಿ : ಆಷಾಢ ಮಾಸದಲ್ಲಿ ಆಚರಿಸುವ ‘ಗುಪ್ತ ನವರಾತ್ರಿ’ಯ ಮಹತ್ವವೇನು?

ಈ ವ್ರತವನ್ನು ಸೂರ್ಯೋದಯದಿಂದ ಚಂದ್ರೋದಯದವರೆಗೆ ಆಚರಿಸಲಾಗುತ್ತದೆ. ಸಂಕಷ್ಟ ಚತುರ್ಥಿಯಂದು ಸಂಜೆ ಗಣಪತಿಯ ಪೂಜೆ ಮಾಡಿ ಈ ವ್ರತವನ್ನು ಮುಕ್ತಾಯಗೊಳಿಸುತ್ತಾರೆ. ಪಂಚಾಂಗದ ಪ್ರಕಾರ, ಆಷಾಢ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯು 2023 ರ ಜುಲೈ 6 ರಂದು ಗುರುವಾರ ಬೆಳಿಗ್ಗೆ 06.30 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಅಂದರೆ, ಜುಲೈ 07 ರ ಶುಕ್ರವಾರದಂದು ಮುಂಜಾನೆ 03.12 ಕ್ಕೆ ಮುಕ್ತಾಯಗೊಳ್ಳುತ್ತದೆ.

ಶನಿ ಸಾಡೇ ಸಾತ್​ ಬಜಾವ್​ ಆಗಲು ಈ ವತ್ರ ಮಾಡಿ  

ಕುಂಭ ರಾಶಿಯವರು ಮತ್ತು ಮಕರ ರಾಶಿಯವರು ಈ ವ್ರತವನ್ನು ಇಂದು ವಿಶೇಷವಾಗಿ ಆರಾಧನೆಯನ್ನು ಮಾಡುವುದರಿಂದ ಜನ್ಮ ಶನಿ, ಸಾಡೇ ಸಾತ್ ಪ್ರಭಾವದಿಂದ ಪಾರಾಗಬಹುದು.

ಗಜಾನನಿಗೆ ವಿಶೇಷ ನೈವೇದ್ಯ

ಕೋಸಂಬರಿ ಕಡುಬು ಒಬ್ಬಟ್ಟನ್ನು ಸಿಹಿ ತಿಂಡಿಗಳನ್ನು ಗಣೇಶನಿಗೆ ಅರ್ಪಿಸಿ ಪೂಜೆಯಾದ ನಂತರ ಸಿಹಿ ತಿಂಡಿಗಳನ್ನು ಚಿಕ್ಕ ಮಕ್ಕಳಿಗೆ ಹಂಚಿ ಅವರ ಆಶೀರ್ವಾದವನ್ನು ಪಡೆಯಿರಿ ನಿಮ್ಮ ಜೀವನದಲ್ಲಿ ಬದಲಾವಣೆಯನ್ನು ನೀವೇ ಆದಷ್ಟು ಬೇಗ ಕಾಣುತ್ತೀರ ಎಂದು ಸಂತೋಷದಿಂದ ನಿಮ್ಮೆಲ್ಲರಿಗೂ ಆಶೀರ್ವಾದವನ್ನು ಮಾಡುತ್ತಾನೆ.

ವತ್ರವನ್ನು ಮಾಡುವಾಗ ಈ ಮಂತ್ರ ಪಠಣೆ ಮಾಡಿ

ಓಂ ನಮೋ ಭಗವತೇ ಗಜಾನನಾಯ ನಮಃ ಈ ಮಂತ್ರವನ್ನು ಸಾಧ್ಯವಾದಷ್ಟು ಶ್ರದ್ಧಾ ಮತ್ತು ಭಕ್ತಿಯಿಂದ ಜಪವನ್ನ ಮಾಡುತ್ತೀರಲ್ಲವೇ ಪೂಜೆಗೆ ವಿಶೇಷವಾಗಿ ಹಳದಿಯ ವಸ್ತ್ರವನ್ನು ಧರಿಸಿ ಗರಿಕೆ ಮತ್ತು ಬಿಲ್ವ ಶ್ರೀಗಂಧವನ್ನು ಅರ್ಪಣೆಯನ್ನು ಮಾಡಿ ಸಂಕಷ್ಟಹರ ಚತುರ್ಥಿಯನ್ನು ಪೂಜೆ ಮಾಡಿ ಜೀವನದ ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗಬಹುದು.

RELATED ARTICLES

Related Articles

TRENDING ARTICLES