ಬೆಂಗಳೂರು : ಉಚಿತ ಗ್ಯಾರಂಟಿ ಜಾರಿ ವಿಚಾರವಾಗಿ ಸದನದಲ್ಲಿ ಗೌಡರ ಕಾಳಗ ನಡೆಯಿತು. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯ ಮಧ್ಯೆ ಟಾಕ್ ವಾರ್ ಏರ್ಪಟ್ಟಿತು.
ಗ್ಯಾರಂಟಿ ವಿಚಾರ ಕುರಿತು ಗುಡುಗಿದ ಅಶ್ವತ್ಥನಾರಾಯಣ, ನಿಮ್ಮನ ನೋಡಿ ಜನ ಅಧಿಕಾರ ಕೊಟ್ಟಿಲ್ಲ. ಗ್ಯಾರಂಟಿ ನೋಡಿ ಕೊಟ್ಟಿದ್ದಾರೆ. ಅದನ್ನು ಸರಿಯಾಗಿ ಕೊಡಿ ಎಂದು ವಾಗ್ದಾಳಿ ನಡೆಸಿದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಶಾಸಕ ಟಿ.ಬಿ ಜಯಚಂದ್ರ ಅವರು, ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಇದೆ. ಸತ್ಯಸಾಯಿ ಮೆಡಿಕಲ್ ಕಾಲೇಜು ಇದೆ. 10 ದಿನಗಳಿದೆ ಅಡ್ಮಿಷನ್ ಮಾಡೋಕೆ. ಆದರೆ, ಇನ್ನೂ ಅದಕ್ಕೆ ಅನುಮತಿ ಕೊಟ್ಟಿಲ್ಲ. ಈಗಲಾದ್ರೂ ಅದಕ್ಕೆ ಅನುಮತಿ ಕೊಡಬೇಕು ಎಂದರು.
ಇದನ್ನೂ ಓದಿ : ನಿನಗೇನು ಮಂಡ್ಯ ಬಗ್ಗೆ ಗೊತ್ತು ಕೂತ್ಕೊಳ್ಳಪ್ಪ : ರಾಜಣ್ಣಗೆ ಹೆಚ್ಡಿಕೆ ಕೌಂಟರ್
ಕೊಡಿ ಫ್ರೀ ಟ್ರೀಟ್ ಮೆಂಟ್
ಜಯಚಂದ್ರ ಒತ್ತಾಯಕ್ಕೆ ಸಾಥ್ ಕೊಟ್ಟ ಅಶ್ವತ್ಥನಾರಾಯಣ ಅವರು, ಕೊಡಿ ಫ್ರೀ ಟ್ರೀಟ್ ಮೆಂಟ್. ಆ ಕಾಲೇಜಿಗೆ ಅನುಮತಿ ಕೊಡಿ ಎಂದು ಜೋರು ಧ್ವನಿಯಲ್ಲೇ ಒತ್ತಾಯಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಡಿಸಿಎಂ ಡಿಕೆಶಿ, ನೀವಿದ್ದಾಗ ಯಾಕೆ ಅನುಮತಿ ಕೊಡಲಿಲ್ಲ ಎಂದು ಪ್ರಶ್ನೆ ಮಾಡಿದರು.
ಅವ್ರ ಕೈಲಿ ಅಧಿಕಾರ ಇತ್ತಲ್ಲ
ನಿಮ್ಮದು ಅಹಂ ಮಾತುಗಳು ಎಂದ ಅಶ್ವತ್ಥನಾರಾಯಣ ಅವರು, ನಿಮ್ಮನ್ನು ನೋಡಿ ಜನ ವೋಟು ಕೊಟ್ಟಿಲ್ಲ. ನಿಮ್ಮ ಗ್ಯಾರಂಟಿ ನೋಡಿ ವೋಟು ಕೊಟ್ಟಿದ್ದು ಎಂದರು. ಈ ವೇಳೆ ಡಿಕೆಶಿಯೂ ಟಾಂಗ್ ಕೊಟ್ಟರು. ಅವರ ಕೈಲಿ ಅಧಿಕಾರ ಇತ್ತಲ್ಲ, ಯಾಕೆ ಅದಕ್ಕೆ ಆಗ ಅವಕಾಶ ಇವರು ಕೊಡಲಿಲ್ಲ ಎಂದು ಗುಡುಗಿದರು.
ಸತ್ಯಸಾಯಿ ಮೆಡಿಕಲ್ ಕಾಲೇಜು ಗದ್ದಲಕ್ಕೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸಹ ಮಧ್ಯ ಪ್ರವೇಶಿಸಿದರು. ಸತ್ಯಸಾಯಿ ಆಸ್ಪತ್ರೆಗೆ ಅನುನತಿ ಕೊಡಬೇಕು ಎಂದು ಒತ್ತಾಯ ಮಾಡಿದರು.