Thursday, May 15, 2025

ಕುಮಾರಸ್ವಾಮಿಗೆ ದೇವರು ಸಮಾಧಾನ ನೀಡಲಿ : ಚಲುವರಾಯಸ್ವಾಮಿ

ಬೆಂಗಳೂರು : ಹೆಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಎಷ್ಟು ವರ್ಗಾವಣೆ ಮಾಡಿದ್ರು ಅಂತ ಕೇಳಿ ಎಂದು ಹೆಚ್ ಡಿಕೆ ವಿರುದ್ಧ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಗುಡುಗಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಸುಮ್ಮನೆ ಅಷ್ಟು ಉದ್ದ, ಇಷ್ಟು ದಪ್ಪ ಇದೆ ಅಂತಾರೆ. ಏನೂ ಇರಲ್ಲ ಎಂದು ಚಾಟಿ ಬೀಸಿದರು.

ಲೋಕಲ್ ಇಶ್ಯೂ ಅದು

ಕುಮಾರಸ್ವಾಮಿಯವರು ಹೊಸದಾಗಿ ಪ್ರಸ್ತಾಪ ಮಾಡ್ತಿಲ್ಲ. ವರ್ಗಾವಣೆ ವಿಚಾರದಲ್ಲಿ ನಾನು ಯಾವುದೇ ಪತ್ರ ಕೊಟ್ಚಿಲ್ಲ. ಲೋಕಲ್ ಇಶ್ಯೂ ಅದು. ನಾನು ಹೋಲ್ಡ್ ಮಾಡಿದ ನಂತರ ವಿಷ ಕುಡಿಯುವುದಾಗಿ ಹೇಳಿದ್ದಾನೆ. ಪೋನ್ ಮಾಡಿ ಆಸ್ವತ್ರೆಯಿಂದ ಶಿಪ್ಟ್ ಮಾಡಬೇಡಿ ಅಂತ ಕುಮಾರಸ್ವಾಮಿ ಹೇಳಿದ್ದಾರೆ ಎಂದು ಕುಟುಕಿದರು.

ಇದನ್ನೂ ಓದಿ : ಸಚಿವ ಚಲುವರಾಯಸ್ವಾಮಿ ರಾಜೀನಾಮೆಗೆ ಹೆಚ್‌.ಡಿ ಕುಮಾರಸ್ವಾಮಿ ಆಗ್ರಹ 

ಮುಖ್ಯಮಂತ್ರಿಗಳನ್ನು ನೋಡಲು ಆಗ್ತಿಲ್ಲ

ಸದನದಲ್ಲಿ ಕುಮಾರಸ್ವಾಮಿಗೆ ನಮ್ಮ ಮಂತ್ರಿಗಳನ್ನು, ಮುಖ್ಯಮಂತ್ರಿಗಳನ್ನು ನೋಡಲು ಆಗ್ತಿಲ್ಲ. ದೇವರು ಕುಮಾರಸ್ವಾಮಿಯವರಿಗೆ ಸಮಾಧಾನ ನೀಡಲಿ. ತಾಲೂಕು ಆಸ್ವತ್ರೆಯಿಂದ ಶಿಪ್ಟ್ ಮಾಡೋದು ಬೇಡ ಅಂತ ಕುಮಾರಸ್ವಾಮಿ ಪೋನ್ ಮಾಡಿ ಅಡ್ಡ ಹಾಕಿದ್ರು. ಹೌದೋ, ಇಲ್ವೋ ಕೇಳಿ ಎಂದು ಕೌಂಟರ್ ಕೊಟ್ಟರು.

ಶಾಸಕ ಬಾಲಕೃಷ್ಣ ಮಾತನಾಡಿ, ಕುಮಾರಸ್ವಾಮಿ ಅವರದ್ದು ಬರೀ ಬ್ಲಾಕ್ ಮೇಲ್. ಅವರು ಬ್ಲಾಕ್ ಮೇಲ್ ಮಾಡೋದು ನಿಲ್ಲಿಸಲಿ. ಅದೇನು ಇದ್ಯೋ, ಆ ದಾಖಲೆ ಬಿಡಲಿ ಮೊದಲು ಎಂದು ಹೇಳಿದರು.

RELATED ARTICLES

Related Articles

TRENDING ARTICLES