Sunday, December 22, 2024

ಹಾಸನ ಶಾಸಕ ಅಂತ ಯಾಕೆ ಕರೀತಿರಿ : ಹೆಚ್ಡಿಕೆ ವಿರುದ್ದ ಶಿವಲಿಂಗೇಗೌಡ ಸಿಡಿಮಿಡಿ

ಬೆಂಗಳೂರು : ತಮ್ಮನ್ನು ಹಾಸನ ಜಿಲ್ಲೆಯ ಶಾಸಕ ಎಂದು ಕರೆದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಮೇಲೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಸಿಡಿಮಿಡಿಗೊಂಡ ಘಟನೆ ನಡೆಯಿತು.

ವಿಧಾಸಭಾ ಕಲಾಪದಲ್ಲಿ ಈ ಸ್ವಾರಸ್ಯಕರ ಪ್ರಸಂಗ ನಡೆಯಿತು. ನಾವು ಬಡವರ ಮಕ್ಕಳು, ಯಾಕೆ ನನ್ನನ್ನು ಹಾಸನ ಶಾಸಕರು ಅಂತಾ ಕರೀತ್ತೀರಿ, ಹೆಸರು ಹಿಡಿದು ಕರೀರಿ, ನಿಮಗೆ ೧೦ ಲಕ್ಷ ಜನರು ಹೆಸರು ಹಿಡಿದು ಕರೆದ್ರೆ ನನಗೆ ೨ ಲಕ್ಷ ಜನ ಆದರೂ ಹೆಸರು ಹಿಡಿದು ಕರೆದು ಕರೀತ್ತಾರೆ ಎಂದು ಕುಮಾರಸ್ವಾಮಿಯವರಿಗೆ ಶಿವಲಿಂಗೇಗೌಡ ಕೌಂಟರ್ ನೀಡಿದರು.ಅಲ್ಲದೆ ನಿಮ್ಮನ್ನು ನಾವು ಎರಡು ಸಾರಿ ಮುಖ್ಯಮಂತ್ರಿಗಳಾಗಿ ಮಾಡಿಲ್ವಾ..? ಎಂದು ಶಿವಲಿಂಗೇಗೌಡ ಕಿಚಾಯಿಸಿದರು. ನೀವು ನನ್ನ ಹೆಸರು ಹಿಡಿದು ಕರೆಯೋದು ಬೇಡ ಎಂದು ಆಲ್ಲೇ ಸದನದಲ್ಲೇ ಇದ್ದ ಕುಮಾರಸ್ವಾಮಿಯವರಲ್ಲಿ ಕೇಳಿದ ಶಿವಲಿಂಗೇಗೌಡರು ನಮ್ಮನ್ನು ಹಾಸನ ಜಿಲ್ಲೆಯ ಶಾಸಕರು ಅಂತಾ ಯಾಕೆ ಕರೀತ್ತೀರಿ ಎಂದು ಪ್ರಶ್ನಿಸಿದರು.

ಇವಾಗ ಏನೋ ನೀವು ನಮ್ಮ ವಿಶ್ವಾಸ ಕಳೆದುಕೊಂಡ್ರಿ, ಅದಕ್ಕಾಗಿ ನಾವು ಹೊರಗಡೆ ಬಂದಿದ್ದೇವೆ
ಆದರೆ ನೀವು ಹಾಸನ ಜಿಲ್ಲೆಯ ಶಾಸಕರು ಅಂತಾ ಕರೆಯೋದು ಎಷ್ಟು ಸರೀ..? ಎಂದು ಶಿವಲಿಂಗೇಗೌಡ ಸದನದಲ್ಲಿಯೇ ನೇರವಾಗಿಯೇ ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಿದರು.ಬಳಿಕ ಕೊನೆಗೂ ಆಯ್ತು ಇರೀ ಶಿವಲಿಂಗೇಗೌಡ್ರೇ, ಅದೇನೋ ನಿನ್ನೆ ಹೇಳ್ರಿದ್ರಲ್ಪ ವರ್ಗಾವಣೆಯದ್ದೇ ದಾಖಲೆ ಕೊಡಿ ಎಂದು ಕೊಬ್ಬರಿಯ ಬಗ್ಗೆ ಸದನದಲ್ಲಿ ಕುಮಾರಸ್ವಾಮಿ ಮಾತು ಮುಂದುವರಿಸಿದರು.
ಶಿವಲಿಂಗೇಗೌಡರ ಮಾತಿನ ಬಳಿಕ ಕೊನೆಗೆ ಶಿವಲಿಂಗೇಗೌಡ್ರೇ ಎಂದು ಹೆಸರು ಹೇಳಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ.

RELATED ARTICLES

Related Articles

TRENDING ARTICLES