Sunday, January 19, 2025

ಕಾರಿನ ಗ್ಲಾಸ್ ಒಡೆದು ಚಿನ್ನಾಭರಣ ಕಳ್ಳತನ

ಬೆಂಗಳೂರು : ಕಾರಿನ ಗ್ಲಾಸ್ ಒಡೆದು ಹಣ, ಚಿನ್ನಾಭರಣ, ಲ್ಯಾಪ್​​​ಟಾಪ್ ಕದ್ದಿರುವ ಘಟನೆ ಆನೇಕಲ್ ತಾಲ್ಲೂಕಿನ ಚಂದಾಪುರದ ಹೆನ್ನಾಗರ ಬಳಿಯ A2B ಹೋಟೆಲ್ ಬಳಿ ನಡೆದಿದೆ. 

2 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನ ಕದ್ದೊಯ್ದಿದ್ದಾರೆ. ಕಾರು ಉದ್ಯಮಿ ನವೀನ್ ಎಂಬುವವರಿಗೆ ಸೇರಿದ್ದು, ಆಸಾಮಿಗಳು ಕ್ಷಣಮಾತ್ರದಲ್ಲಿ ಕೈಚಳಕ ತೋರಿ ಎಸ್ಕೇಪ್ ಆಗಿದ್ದಾರೆ.

ರಾತ್ರಿ 7 ಗಂಟೆಯ ಸಮಯದಲ್ಲಿ ಊಟ ಮಾಡಲು ಹೋಟೆಲ್​​ಗೆ ತೆರಳಿದ್ದಾಗ ಘಟನೆ ಸಂಭವಿಸಿದೆ. ಊಟ ಮುಗಿಸಿ ಕಾರ್ ಪಾರ್ಕಿಂಗ್​​ಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕಾರಿನಲ್ಲಿದ್ದ ಬಟ್ಟೆ, ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ : ಪಾರ್ಲೆ-ಜಿ ಜೊತೆ ಸಾಗಿಸುತ್ತಿದ್ದ 2,520 ಲೀಟರ್ ಮದ್ಯ ವಶ

ಹೋರ್ಡಿಂಗ್ಸ್ ಬಿದ್ದು ವಾಹನಗಳು ಜಖಂ

ಮಳೆ, ಗಾಳಿಗೆ ಬೃಹತ್ ಹೋರ್ಡಿಂಗ್ಸ್ ಬಿದ್ದು ವಾಹನಗಳು ಜಖಂ ಆಗಿರುವ ಘಟನೆ ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ನಡೆದಿದೆ. ಹೋರ್ಡಿಂಗ್ಸ್ ಅಡಿಭಾಗದಲ್ಲಿ ನಿಲ್ಲಿಸಿದ್ದ 12ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ.

ಮಂಗಳೂರಿನಲ್ಲಿ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ರಭಸವಾದ ಗಾಳಿಗೆ ರಸ್ತೆ ಬದಿ ಹಾಕಿದ್ದ ಖಾಸಗಿ ಹೋರ್ಡಿಂಗ್ಸ್ ಬಿಲ್ಡಿಂಗ್ ಮೇಲೆ ಉರುಳಿ ಬಿದ್ದಿದೆ. ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

RELATED ARTICLES

Related Articles

TRENDING ARTICLES