ನವದೆಹಲಿ : 265 ಲಕ್ಷ ಮೆಟ್ರಿಕ್ ಟನ್ ಕೇಂದ್ರದ ಹತ್ತಿರ ಸ್ಟಾಕ್ ಇದೆ. ಆದ್ರೆ, ನಾವು ಕೇಳಿದ್ರೆ ಮಾತ್ರ ಅಕ್ಕಿ ಕೊಡ್ತಾ ಇಲ್ಲ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಸಿಡಿಮಿಡಿಗೊಂಡರು.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಆಹಾರ ಸಚಿವರು ದೇಶದ ಎಲ್ಲಾ ರಾಜ್ಯದ ಆಹಾರ ಸಚಿವರ ಜೊತೆ ಸಭೆ ಕರೆದಿದ್ದರು. ಬೇರೆ ಬೇರೆ ರಾಜ್ಯದ ಸಚಿವರು ಸಭೆಯಲ್ಲಿ ಭಾಗಿಯಾಗಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.
ಕೇಂದ್ರ ಸಚಿವ ಪಿಯುಷ್ ಗೋಯಲ್ ಅವರು ತುಂಬಾ ಚೆನ್ನಾಗಿ ಉತ್ತರ ಕೊಡ್ತಾರೆ. ಈಗಿರುವ ಬಿಜೆಪಿ ಸರ್ಕಾರದ ಮಂತ್ರಿಗಳು ಬಹಳ ಬುದ್ದಿವಂತರು ಇದ್ದಾರೆ. ಉತ್ತಮ ಉತ್ತರ ನೀಡುತ್ತಾರೆ. ಆದ್ರೆ, ರಿಸಲ್ಟ್ ಮಾತ್ರ ಏನೂ ಇಲ್ಲ. ಯಾವ ರಾಜ್ಯಗಳಿಗೆ ಏನೂ ಬೇಕೋ ಅದುನ್ನು ಕೊಡದೇ ಅನ್ಯಾಯ ಮಾಡುತ್ತಿದ್ದಾರೆ ಎಂದು ಗರಂ ಆದರು.
ಓಪನ್ ಮಾರ್ಕೆಟ್ ಗೆ ಬಿಡ್ತಿದ್ದಾರೆ
ಮುಖ್ಯವಾಗಿ ರಾಜ್ಯಗಳಿಗೆ ಇದ್ದ ಅಧಿಕಾರವನ್ನು ಕೇಂದ್ರ ಸರ್ಕಾರ ಕಸಿದುಕೊಂಡಿದೆ. ಇವ್ರೇ ಕೊಟ್ಟ ಅಧಿಕಾರ, ಇವ್ರೆ ವಾಪಸ್ ಪಡೆದುಕೊಂಡಿದ್ದಾರೆ. ನಮಗೆ ಅಕ್ಕಿ ಬೇಕು, ಅವ್ರು ಕೊಡೋಕೆ ಆಗಲ್ಲ ಅಂತಿದ್ದಾರೆ. ರಾಜ್ಯಗಳಿಗೆ ಅಕ್ಕಿ ಕೊಂದುಕೊಳ್ಳುವ ಅವಕಾಶ ಬಂದ್ ಮಾಡಿದೆ. ಓಪನ್ ಮಾರ್ಕೆಟ್ ಗೆ ಇವ್ರು ಅಕ್ಕಿಯನ್ನ ಬಿಡ್ತಿದ್ದಾರೆ ಎಂದು ಆರೋಪ ಮಾಡಿದರು.
ಇದನ್ನೂ ಓದಿ : ನಮ್ಗೆ 40% ಕಮಿಷನ್ ಅಂತಿದ್ರು, ಇವರದು 100% ಸರ್ಕಾರ : ರವಿಕುಮಾರ್
5 ಕೆಜಿ ಅಕ್ಕಿ ನಾವು ಕೊಡ್ಬೇಕಿತ್ತು
ನಾವು ಕಿಲೋ ಅಕ್ಕಿಗೆ 34 ರೂಪಾಯಿ ಕೊಡ್ತೀವಿ ಅಂದ್ರು ಅಕ್ಕಿ ಕೊಡ್ತಿಲ್ಲ. ಓಪನ್ ಮಾರ್ಕೆಟ್ ಗೆ 31 ರೂಪಾಯಿಗೆ ವ್ಯಾಪಾರ ಮಾಡ್ತಿದ್ದಾರೆ. ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡ್ತಿದೆ. ಒಟ್ಟಾರೆ 10 ಕಿಲೋ ಅಕ್ಕಿ ನಾವು ಘೋಷಣೆ ಮಾಡಿದ್ದೇವೆ. ಕೇಂದ್ರ ಸರ್ಕಾರ 5 ಕಿಲೋ ಕೊಡ್ತಿದೆ, ಇನ್ನುಳಿದ 5 ಕಿಲೋ ನಾವು ಕೊಡ್ಬೇಕಿತ್ತು, ಕೊಡ್ತೇವೆ. ಆದ್ರೆ ಕೇಂದ್ರ ಇದಕ್ಕೆ ಸಹಾಯ ಮಾಡ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಎಲ್ಲ ಯೋಜನೆ ಬಂದ್ ಮಾಡಿದೆ
ನರೇಗಾ ಯೋಜನೆ, ಸಾಲ ಮನ್ನಾ ಸೇರಿ ಬಹುತೇಕ ಯೋಜನೆ ಮಾಡಿದ್ದು ಯುಪಿಎ ಸರ್ಕಾರ. ಭಾರತದಲ್ಲಿ ಯಾರು ಸಹ ಹಸಿವಿನಿಂದ ಮಲಗಬಾರದು ಅಂತ ಫುಡ್ ಸೆಕ್ಯೂರಿಟಿ ಬಿಲ್ ತರಲಾಗಿತ್ತು. ಬಿಜೆಪಿ ಸರ್ಕಾರ ಬಂದಮೇಲೆ ಈ ಕಾನೂನುಗಳನ್ನ ಹೇಗೆ ಉಪಯೋಗಿಸಬೇಕು ಅಂತ ಗೊತ್ತಿಲ್ಲ. ಈ ಕಾನೂನುಗಳನ್ನು ಬಿಜೆಪಿ ಸರ್ಕಾರ ಬಂದ್ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.